ಕಲಾ ಕೌಶಲ್ಯ ವಿಕಾಸದಿಂದ ವ್ಯಕ್ತಿತ್ವ ವಿಕಾಸ : ಅಂದಾನೆಪ್ಪ ವಿಭೂತಿ

ಕಲಾ ಕೌಶಲ್ಯ ವಿಕಾಸದಿಂದ ವ್ಯಕ್ತಿತ್ವ ವಿಕಾಸ : ಅಂದಾನೆಪ್ಪ ವಿಭೂತಿ
Published on

ಗದಗ: ಕೌಶಲ್ಯವೆಂಬುವ ಸಾಮರ್ಥ್ಯ ಮತ್ತು ನಮ್ಮ ಭೌದ್ದಿಕ ವಿಕಾಸ ಪ್ರಭುದ್ದವಾಗಿ ಬೆಳೆಯುತ್ತದೆ. ಪ್ರತಿಯೊಬ್ಬ ಆದರ್ಶ ವ್ಯಕ್ತಿಯ ಜೀವನ ಶೈಲಿ ಮತ್ತು ಆದರ್ಶತೆಯನ್ನು ಅಧ್ಯಯನ ಮಾಡಿ ಅವರ ಪ್ರೇರಣೆಯಿಂದ ನೀವು ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ. ಆದ್ದರಿಂದ ಕಲಾ ಕೌಶಲ್ಯ ವಿಕಾಸದಿಂದ ಉನ್ನತ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಉನ್ನತ- ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ ಎಂದು ವಿಭೂತಿ ಮಾಸ ಪತ್ರಿಕೆಯ ಪ್ರಕಾಶಕರಾದ ಅಂದಾನೆಪ್ಪ ವಿಭೂತಿ ಅಭಿಪ್ರಾಯಪಟ್ಟರು.
ವಿಜಯ ಲಲಿತಕಲಾ ಸಂಸ್ಥೆಯ ವಿಜಯ ಲಲಿತ ಕಲಾ ಕಾಲೇಜ ಗದಗ ವ್ಯಕ್ತಿತ್ವ ವಿಕಸನ ವಿಭಾಗದ ವತಿಯಿಂದ ವ್ಯಕ್ತಿತ್ವ ವಿಕಸನ ವಿಭಾಗದ ಕೌಶಲ್ಯ ವಿಕಾಸ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು . ವಿಜಯ ಲಲಿತಕಲಾ ಸಂಸ್ಥೆಯು ಸಮಾಜದ ಕೌಶಲ್ಯಯುಕ್ತ ವ್ಯಕ್ತಿತ್ವನ್ನು ಹೊಂದಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಳಸಿ ಈ ನಾಡಿಗೆ ಸಾವಿರಾರು ಕಲಾವಿದರನ್ನು ಕೊಡುಗೆ ನೀಡಿದೆ ಅಂತಹ ಕೌಶಲ್ಯ ತುಂಬಿದ ಪ್ರತಿಭಾವಂತರನ್ನು ಬೆಳೆಸುವದು ಕಷ್ಠ -ಸಾಧ್ಯ ಅಂತಹ ದಿನಮಾನದಿಂದ ಇಲ್ಲಿಯವರೆಗೆ ಪ್ರತಿಭಾವಂತರ ಬದುಕು ಕಟ್ಟುವಲ್ಲಿ ಶ್ರಮಿಸುತ್ತಿದೆ . ಅದರಂತೆ ಆದರ್ಶತೆ ಮತ್ತು ವ್ಯಕ್ತಿಕತ್ವ ವಿಕಾಸವಾಗಬೇಕಾದರೆ ಸದಾ ಅಧ್ಯಯನ ಮತ್ತು ಸಹನೆ ಸೃಜನಶೀಲ ಚಿಂತನೆ ಹೊಂದಿದವರು ಪ್ರತಿಭಾವಂತರಾಗಿ ಬೆಳೆಯಲು ಸಾಧ್ಯ. ಅದರಂತೆ ಕಲಾಮಹರ್ಷಿ ಟಿ.ಪಿ ಅಕ್ಕಿ, ಬಿ. ಈ ಅಣ್ಣಿಗೇರಿ ಹೀಗೆ ಹಲವಾರು ಗುರುಗಳು ಉತ್ತಮ ಸಂಸ್ಕಾರ ಸದ್ಗುಣಗಳನ್ನು ಬೆಳೆಸುವಲ್ಲಿ ಅಕ್ಕಿ ಹಾಗೂ ಅಣ್ಣಿಗೇರಿ ಗುರುಗಳು ಉತ್ತಮ ಪ್ರತಿಭಾವಂತರನ್ನು ಬೆಳೆಸಿದ್ದಾರೆ. ಕೌಶಲ್ಯಯುಕ್ತ ಶಕ್ತಿಯನ್ನು ಬೆಳೆಸಲು ಸದಾ ಸದ್ಗುಣ ಮತ್ತು ಉನ್ನತ ಮಟ್ಟದ ಚಿಂತನೆಯ ಕಡೆಗೆ ಗಮನ ನೀಡಬೇಕು ಎಂದು ಮಾತನಾಡಿದರು
ಕಾರ್ಯಕ್ರಮದ ಉಪಸ್ಥಿತಿ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಅಶೋಕ ಅಕ್ಕಿ ಮಾತನಾಡಿ ಕೌಶಲ್ಯವೆಂಬುವದು ಅಭಿವ್ಯಕ್ತಿ ಅದನ್ನು ಬೆಳವಣಿಗೆ ಸದು ಅವನ ಸ್ವ ಸಾಮರ್ಥ್ಯ ಹೊಂದಿದ ಪ್ರತಿಭೆ. ಅದನ್ನು ಪಡೆಯಲು ಸದಾ ಸೃಜನಶೀಲ ಮನೋಭಾವ ಹೊಂದಬೇಕು ಸದಾ ಕ್ರೀಯಾಶೀಲರಾಗಿ, ಅಧ್ಯಯನಶೀಲರಾಗಿ ಇದರಿಂದ ನೀವು ವಿಶೇಷ ಪ್ರತಿಭಾವಂತರಾಗಿ ಬೆಳೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನೇಳಿದರು .
ವೇದಿಕೆಯ ಮೇಲೆ ವ್ಯಕ್ತಿತ್ವ ವಿಕಸನ ವಿಭಾಗದ ಕೋಆರ್ಡಿನೇಟರ ಪ್ರೊ . ಎಸ್ ವಿ ಗುಂಜಾಳ, ಪ್ರೊ ಬಿ. ಸಿ ಕುತ್ನಿ, ಶ್ರೀಮತಿ ವಾಯ್ ಶ್ರೀದೇವಿ ಪ್ರಾಚಾರ್ಯರು ವಿಜಯ ಪದವಿ ಪೂರ್ವ ಕಾಲೇಜ ಹಾಗೂ ಬಸವರಾಜ ಗೌಡರ, ಮಂಜುನಾಥ ವೈ ಉಪಸ್ಥಿತರಿದ್ದರು,
ರಾಜೇಶ್ವರಿ ಸಂಗಡಿಗರು ಪ್ರಾರ್ಥಿಸಿದರು, ಪ್ರೊ. ಎಸ್ ವಿ ಗುಂಜಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು ಪ್ರೊ ಬಸವರಾಜ ನೆಲಜೇರಿ ನಿರೂಪಿಸಿದರು, ಮಂಜುನಾಥ ವೈ ವಂದಿಸಿದರು. ಕಾಲೇಜಿನ ಸಿಬ್ಬಂದಿವರ್ಗ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net