ವಿಜಯ ಕ್ರೆಡಿಟ್ ಸೊಸೈಟಿಯಿಂದ ಶೇ.18 ಡಿವಿಡೆಂಡ್ : ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಅಜಿತ್ ಶೆಟ್ಟಿ ಮಾಹಿತಿ

New Project (15)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಳೆದ ಆರ್ಥಿಕ ಸಾಲಿನಲ್ಲಿ 1,104 ಕೋಟಿ ರೂ.ಗಿಂತ ಅಧಿಕ ವ್ಯವಹಾರ ನಡೆಸಿದ್ದು, 3 ಕೋಟಿ ರೂ.ಗಿಂತ ಅಧಿಕ ಲಾಭ ಗಳಿಸಿದೆ. ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಲು ನಿರ್ಣಯಿಸಲಾಗಿದೆ ಎಂದು ಅಧ್ಯಕ್ಷ ಅಜಿತ್ ಜಿ.ಶೆಟ್ಟಿ ಹೇಳಿದರು. ಗುರುವಾಯನಕೆರೆ ಕೇಂದ್ರ ಕಚೇರಿ ಸಮೀಪದ ಬಂಟರ ಭವನದಲ್ಲಿ ಶನಿವಾರ ಸಂಘ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಜಯಂತ ಶೆಟ್ಟಿ, ನಿರ್ದೇಶಕರಾದ ಎಸ್. ಜಯರಾಮ ಶೆಟ್ಟಿ, ಎಂ.ಜಿ. ಶೆಟ್ಟಿ, ಬಿ. ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ, ಪುಷ್ಪರಾಜ ಶೆಟ್ಟಿ, ರುರಾಮ ಶೆಟ್ಟಿ ಎ., ಕೃಷ್ಣ ರೈ ಟಿ., ಜಯರಾಮ ಭಂಡಾರಿ, ಪುರಂದರ ಶೆಟ್ಟಿ, ಮಂಜುನಾಥ ರೈ, ರಾಜು ಶೆಟ್ಟಿ, ಜಯರಾಮ ಶೆಟ್ಟಿ, ಸಾರಿಕಾ ಶೆಟ್ಟಿ, ವಿಜಯಾ ಬಿ.ಶೆಟ್ಟಿ, ವಿಶೇಷ ಆಹ್ವಾನಿತರಾದ ರಾಜೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮಾರ್ಗದರ್ಶಕ ಶಶಿಧರ ಶೆಟ್ಟಿ ನವಶಕ್ತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ಮತ್ತು ಎಲ್ಲ ಶಾಖೆಗಳ ಪ್ರಬಂಧಕರು, ಸಿಬ್ಬಂದಿ, ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಜಯಂತ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ಸೀತಾರಾಮ್ ಶೆಟ್ಟಿ ವಂದಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿದರು.

ಸಂಘ 33,245 ಸದಸ್ಯರನ್ನು ಹೊಂದಿದೆ. 4 ಕೋಟಿ ರೂ.ಗಿಂತ ಅಧಿಕ ಪಾಲು ಭಂಡವಾಳ ಸಂಗ್ರಹಿಸಿದೆ. 247 ಕೋಟಿ ರೂ.ಠೇವಣಿ ಹೊಂದಿದೆ.216 ಕೋಟಿ ರೂ.ಗಿಂತ ಅಧಿಕ ಸಾಲ ನೀಡಲಾಗಿದೆ. ಸಾಲ ವಿತರಣೆಯಲ್ಲಿ ಕಳೆದ ವರ್ಷಕ್ಕಿಂತ 39.71ಶೇ., ಠೇವಣಿ ಸಂಗ್ರಹದಲ್ಲಿ 36.04ಶೇ. ಪ್ರಗತಿ ಸಾಧಿಸಲಾಗಿದೆ. ಸಂಸ್ಥೆ ಬೆಳೆಯಲು ಗ್ರಾಹಕರ ವಿಶ್ವಾಸ, ಸಿಬ್ಬಂದಿ ನಿಸ್ವಾರ್ಥ ಸೇವೆ, ಹಿರಿಯ ನಿರ್ದೇಶಕರ ಮಾರ್ಗದರ್ಶನ ಅಗತ್ಯ. ಅಜಿತ್ ಜಿ.ಶೆಟ್ಟಿ, ವಿಜಯ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net