ಯುವ ಜನತೆ ಅಭ್ಯುದಯಕ್ಕೆ ಐಟಿ ಪಾರ್ಕ್ : ಡಾ.ಕೆ.ಪ್ರಕಾಶ ಶೆಟ್ಟಿ ಹೇಳಿಕೆ

New Project (4)
Published on

ಮೂಲ್ಕಿ: ಕರಾವಳಿಯ ಯುವ ಜನತೆ ಅಭ್ಯುದಯಕ್ಕಾಗಿ ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣದ ಮೂಲಕ ಸ್ಥಳೀಯ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಉದ್ಯಮಿ ಎಂ.ಆರ್.ಜಿ. ಗ್ರೂಪ್ ಚೇರ್ಮನ್ ಡಾ.ಕೆ.ಪ್ರಕಾಶ ಶೆಟ್ಟಿ ಹೇಳಿದರು.

ಮೂಲ್ಕಿ ವಿಜಯಾ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ಸ್ಥಾಪಕರ ದಿನಾಚರಣೆ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಕೆ.ಶ್ರೀಧರ ರಂಗನಾಥ ಪೈ ಮಾತನಾಡಿ, ಪದವಿ ಶಿಕ್ಷಣ ಅಧ್ಯಯನಶೀಲತೆ, ಸಂಶೋಧನೆ, ವಿಶ್ಲೇಷಣೆ ಒಂದು ಸಮಗ್ರ ರೂಪವಾದರೆ ಮಾತ್ರ ವಿದ್ಯಾರ್ಥಿಗಳು ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದರು.

ಸಾಧಕ ಹಳೇ ವಿದ್ಯಾರ್ಥಿಗಳಾದ ಸಿಎ ಶಂಕರ ಶೆಟ್ಟಿ ಮತ್ತು ಉದ್ಯಮಿ ಎಸ್.ಎನ್.ಹೆಗ್ಡೆ ಮಾತನಾಡಿದರು. ಆಡಳಿತ ಮಂಡಳಿ ಅಧ್ಯಕ್ಷ ಎನ್.ಸುಹಾಸ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಆಡಳಿತ ಮಂಡಳಿ ಸದಸ್ಯರಾದ ಶಮೀನಾ ಆಳ್ವ, ಪ್ರೊ.ಸ್ಯಾಮ್ ಮಾಬೆನ್, ಎಂ.ಬಿ.ಖಾನ್, ಸಿಎ ಶಿವರಾಮ್ ಕಾಮತ್, ಡಾ.ರೋಶನ್‌ಕುಮಾರ್ ಶೆಟ್ಟಿ, ಡಾ.ಶೈಲಜಾ ವೈ.ವಿ., ಎಸ್.ಎನ್.ಹೆಗ್ಡೆ ಉಪಸ್ಥಿತರಿದ್ದರು. ಪ್ರೊ.ವೆಂಕಟೇಶ್ ಭಟ್ ಸ್ವಾಗತಿಸಿದರು. ರಾಜೇಶ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಬಿ.ಶೆಟ್ಟಿ ವಂದಿಸಿದರು.

ವಿಜಯಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಬೋಧಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಪಮೀದಾ ಬೇಗಂ ಹಾಗೂ ಕಚೇರಿ ಸಿಬ್ಬಂದಿ ಸಾವಿತ್ರಿ ವಿ., ನಾಗೇಶ್ ಎಸ್.ಕೋಟ್ಯಾನ್, ಜಯ ಸಿ.ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ರ‌್ಯಾಂಕ್ ವಿಜೇತರಾದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net