ವಿಜಯ್ ಕುಮಾರ್‌ಗೆ ಉತ್ತಮ ರಾಜಕೀಯ ಭವಿಷ್ಯ

IMG-20250724-WA0193
ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್ ಕುಮಾರ್ ದಂಪತಿಯನ್ನು ಮೈಮಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಹರದನಹಳ್ಳಿಯ ಅವರ ನಿವಾಸದಲ್ಲಿ ಇತ್ತೀಚೆಗೆ ಅಭಿನಂದಿಸಿದರು. ಉಪ್ಪಾರ ಸಮಾಜದ ತಾಲೂಕು ಯುವ ಮುಖಂಡ ಮುದುಗುಪ್ಪೆ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಅಂಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎ.ಟಿ . ಸತೀಶ್, ಅಭಿಮಾನಿಗಳು ಇದ್ದರು.
Published on

ಸಾಲಿಗ್ರಾಮ: ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್ ಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯವಿದೆ ಎಂದು ಮೈಮಲ್ ನಿರ್ದೇಶಕ ಎ.ಟಿ.ಸೋಮಶೇಖರ್ ತಿಳಿಸಿದರು.

ಹರದನಹಳ್ಳಿ ಗ್ರಾಮದಲ್ಲಿ ವಿಜಯಕುಮಾರ್ ದಂಪತಿಯನ್ನು ಬೆಳ್ಳಿ ಗದೆ ನೀಡಿ ಅಭಿನಂದಿಸಿ ಮಾತನಾಡಿದರು. ವಿಜಯ್ ಕುಮಾರ್ ಮುಡಾ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಜನರಿಗೆ ಉತ್ತಮ ಆಡಳಿತ ಕೊಟ್ಟಂತಹ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ಜತೆಗೆ ಅಧಿಕಾರ ಇದ್ದರೂ, ಇಲ್ಲದಿದ್ದರೂ ಜನರ ಸೇವೆ ನಿಲ್ಲಿಸಿಲ್ಲ. ಇವರ ಸೇವೆಯನ್ನ ಪರಿಗಣಿಸಿ ಅನೇಕ ಸಂಘ ಸಂಸ್ಥೆಗಳು ಇವರಿಗೆ ರಾಜ್ಯಮಟ್ಟದ ಹಲವು ಪ್ರಶಸ್ತಿಗಳನ್ನು ನೀಡಿದ್ದಾರೆ ಎಂದರು.

ಉಪ್ಪಾರ ಸಮಾಜದ ತಾಲೂಕು ಯುವ ಮುಖಂಡ ಮುದುಗುಪ್ಪೆ ಕುಮಾರ್ ಮಾತನಾಡಿ, ವಿಜಯ್ ಕುಮಾರ್ ಅವರು, ಇನ್ನೂ ಹೆಚ್ಚು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಡವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಲಿ ಎಂದು ಹಾರೈಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಅಂಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎ.ಟಿ.ಸತೀಶ್ ಸೇರಿದಂತೆ ಅಭಿಮಾನಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net