

ಕುಳಗೇರಿ ಕ್ರಾಸ್: ಗ್ರಾಮಕ್ಕೆ ಆಗಮಿಸಿದ ಕಿತ್ತೂರು ಉತ್ಸವದ ವಿಜಯ ಜ್ಯೋತಿ ರಥಯಾತ್ರೆಗೆ ಬಾದಾಮಿ ತಹಸೀಲ್ದಾರ್ ಮಧುರಾಜ ಕೂಡಲಗಿ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದರು.
ಗ್ರಾಮದ ಎಂಎಲ್‌ಬಿಸಿ ಆವರಣದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಧ್ವನಿ ಎತ್ತಿ ಸಂಸ್ಥಾನಗಳನ್ನು ರಕ್ಷಿಸುವ ಮೂಲಕ ನಾಡು-ನುಡಿಗಾಗಿ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮನ ಶೌರ್ಯ, ಸಾಹಸ, ದೇಶಾಭಿಮಾನ ಯುವಕರಿಗೆ ಸ್ಫೂರ್ತಿ ಎಂದು ಹೇಳಿದರು.
ಉಪತಹಸೀಲ್ದಾರ್ ಮೊಮೀನ, ಕಂದಾಯ ನಿರೀಕ್ಷಕ ವಿ.ಎ. ವಿಶ್ವಕರ್ಮ, ಗ್ರಾಪಂ ಪಿಡಿಒ ಎಸ್. ಜಿ. ಪರಸನ್ನವರ, ಚನ್ನಬಸಪ್ಪ ಮೆಣಸಗಿ, ಸುರೇಶ ಹೆರಕಲ್, ಮಲ್ಲಪ್ಪ ಬಸರಕೋಡ, ಪಾಂಡಪ್ಪ ಉಳ್ಳಾಗಡ್ಡಿ, ಗಿರೀಶ ವಡಕನ್ನವರ, ಸುರೇಶ ಮರದಾನಿ, ನಿಂಗಪ್ಪ ಹೊಸಮನಿ, ಈರಪ್ಪ ಮೆಣಸಗಿ, ಶ್ರೀಕಾಂತ ಅಡಪಟ್ಟಿ, ಗ್ರಾಪಂ ಅಧ್ಯಕ್ಷೆ ರೇಣುಕಾ ಹಿರಗನ್ನವರ, ಸದಸ್ಯರಾದ ಹನುಮಂತ ನರಗುಂದ, ವೆಂಕಣ್ಣ ಹೊರಕೇರಿ, ಮಾರುತಿ ತಲವಾರ, ಸಣ್ಣಬೀರಪ್ಪ ದ್ಯಾವನಗೌಡ್ರ, ಬಸು ಕಟ್ಟಿಕಾರ, ರಾಮನಗೌಡ ದ್ಯಾವನಗೌಡ್ರ,ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಗ್ರಾಮದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಕಲ ವಾದ್ಯಗಳೊಂದಿಗೆ ಎಂಎಲ್‌ಬಿಸಿ ಆವರಣದಿಂದ ಸಂಗೊಳ್ಳಿ ರಾಯಣ್ಣ ವತ್ತದವರೆಗೆ ಮೆರವಣಿಗೆ ಮಾಡಲಾಯಿತು. ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿ ಬೀಳ್ಕೊಡಲಾಯಿತು.