

ಮಡಿಕೇರಿ:
ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ 1971 ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ವಿಜಯ ಸಾಧಿಸಿದ ಹಿನ್ನೆಲೆ ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಶನಿವಾರ ವಿಜಯ್ ದಿವಸ್ ಆಚರಿಸಲಾಯಿತು.
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿನ ಯುದ್ಧ ಸ್ಮಾರಕಕ್ಕೆ ಎನ್‍ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ಜೆಫಿರಿನ್ ಅರಾನ್ಹಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲಸುಬ್ರಮಣ್ಯಂ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಕೆ.ಪಿ.ಸೋಮಣ್ಣ, ಮಡಿಕೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಪಿ.ಕೆ.ಕುಟ್ಟಪ್ಪ, ಮಾಜಿ ಸೈನಿಕರಾದ ಟಿ.ಸಿ.ಗಣಪತಿ, ಕೆ.ಪಿ.ಮುತ್ತಣ್ಣ, ಕಾವೇರಪ್ಪ, ಗೌಡಂಡ ತಿಮ್ಮಯ್ಯ, ಎನ್.ಎ.ಅಯ್ಯಪ್ಪ, ಎಚ್.ಆರ್.ವಾಸಪ್ಪ, ಪ್ರಭಾಕರ, ಸುಬ್ರಮಣಿ, ಚಿಣ್ಣಪ್ಪ, ಎನ್.ಎಂ.ಸೋಮಯ್ಯ, ಎಂ.ಕೆ.ನಾಚಪ್ಪ, ಕೆ.ಪಿ.ಮ್ಯಾಥ್ಯು, ಬಿ.ಸಿ.ಎಂ.ಇಲಾಖೆ ಅಧಿಕಾರಿ ಎನ್.ಮಂಜುನಾಥ್, ರೆಡ್‍ಕ್ರಾಸ್ ಜಿಲ್ಲಾ ಉಪಾಧ್ಯಕ್ಷರಾದ ಎಚ್.ಟಿ.ಅನಿಲ್ ಇತರರು ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು. ನಂತರ ಮೌನ ಆಚರಿಸಲಾಯಿತು.