ಬ್ರಟಿಷರ ಧ್ವಜ ದೇಶದಲ್ಲಿ ಮೊಟ್ಟ ಮೊದಲು ಇಳಿದು 300 ವರ್ಷ!!

Vijay Divas
Published on

ಕಾರವಾರ: ಬ್ರಿಷಿಷರ ವಿರುದ್ಧದ ಭಾರತದ ಮೊದಲ ಸ್ವಾತಂತ್ರ÷್ಯ ಸಂಗ್ರಾಮವನ್ನು 1857 ರ ಸಿಪಾಯಿ ದಂಗೆ ಎಂದು ಇತಿಹಾಸದಲ್ಲಿ ಗುರುತಿಸಲಾಗಿದೆ. ಆದರೆ, ಅದಕ್ಕಿಂತ ಸಾಕಷ್ಟು ಮುಂಚೆಯೇ ವ್ಯಾಪಾರಕ್ಕೆ ಬಂದಿದ್ದ ಬ್ರಿಟಿಷರನ್ನು ಹೊಡೆದೋಡಿಸಿದ ಅಪೂರ್ವ ಘಟನೆ ಇತಿಹಾಸದ ಪುಟಗಳಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿಲ್ಲ.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಉತ್ತರ ಕನ್ನಡ ಪ್ರದೇಶವನ್ನು ಆಳಿದ್ದ ಸೋದೆ ಸದಾಶಿವರಾಯರು 1725 ರಲ್ಲೇ ಕಾರವಾರದ ಕಡವಾಡದಲ್ಲಿ ಬ್ರಿಟಿಷರ ಧ್ವಜವನ್ನು ಮೊಟ್ಟ ಮೊದಲು ಇಳಿಸಿದ್ದರು ಎನ್ನಲಾಗಿದೆ. ಬ್ರಿಟಿಷರನ್ನು ಓಡಿಸಿ ಫೆ.26 ಕ್ಕೆ ಸರಿಯಾಗಿ 300 ವರ್ಷಗಳು ಸಂದಿವೆ.

ಬ್ರಿಟಿಷರು ಜಿಲ್ಲೆಯ ಕಾಳು ಮೆಣಸು, ಹತ್ತಿ ಬಟ್ಟೆ ಹಾಗೂ ಮರಮಟ್ಟುಗಳನ್ನು ರಫ್ತು ಮಾಡುವ ಸಲುವಾಗಿ ಶಿರವಾಡದ ನಂದವಾಳದಲ್ಲಿ ಕೋಟೆಯ ಮಾದರಿಯ ಉಗ್ರಾಣ ನಿರ್ಮಿಸಿದ್ದರು. ಜಿಲ್ಲೆಯ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಎಂಬುದನ್ನು ಅರಿತ ಆಗಿನ ಈ ಭಾಗದ ಸಾಮಂತ ಅರಸ ಸೋದೆ ಸದಾಶಿವರಾಯರು ಕಾರವಾರದಲ್ಲಿ ಬ್ರಿಟಿಷರ ಉಗ್ರಾಣ ಅಥವಾ ಕೋಟೆಯನ್ನು ನಿಯಂತ್ರಿಸುವ ಸಲುವಾಗಿ 1715 ರಲ್ಲಿ ಸದಾಶಿವಗಡ ಕೋಟೆ ನಿರ್ಮಾಣ ಮಾಡುತ್ತಾರೆ.

ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿಯುತ್ತಾರೆ ಅವರ ಸೈನಿಕರನ್ನು ಬಿಟ್ಟು ಬ್ರಿಟಿಷರ ಕೋಟೆಗಳ ಉಗ್ರಾಣದ ಮೇಲೆ ದಾಳಿ ಮಾಡಿಸುತ್ತಾರೆ. ಅವರ ನಿರಂತರ ಹೋರಾಟಕ್ಕೆ ಬೆದರಿದ ಬ್ರಿಟಿಷ್ ಅಽಕಾರಿಗಳು 1725 ರ -ೆ. 26 ರಂದು ಕಡವಾಡ, ನಂದವಾಳ ಉಗ್ರಾಣಕ್ಕೆ ಶಾಶ್ವತವಾಗಿ ಬೀಗ ಹಾಕಿ ಮುಂಬೈಗೆ ತೆರಳುತ್ತಾರೆ.

ಸೋದೆ ಸದಾಶಿವರಾಯನ ವಿರುದ್ಧ ಹೋರಾಡಲು ಬ್ರಿಟಿಷರು ಮುಂಬೈನ ಈಸ್ಟ್ ಇಂಡಿಯಾ ಕಂಪನಿಯ ಅಽಕಾರಿಗಳ ಜತೆ ಚರ್ಚಿಸಿದ ದಾಖಲೆಗಳು ಲಭ್ಯವಾಗಿವೆ. ಆದರೆ, ಇದು ಯಾವುದೇ ಪಠ್ಯದಲ್ಲಾಗಲಿ. ಐತಿಹಾಸಿಕ ಪುಟಗಳಲ್ಲಿ ದಾಖಲಾಗಿಲ್ಲ. ಅಂದು ಸೋದೆ ಸದಾಶಿವರಾಯ ಕಟ್ಟಿದ ಕೋಟೆ ಮಾತ್ರ ಆತನ ಹೆಸರಿನ ಅವಶೇಷವಾಗಿ ಉಳಿದುಕೊಂಡಿದೆ.

8 ವರ್ಷಗಳ ಹಿಂದೆ ಗಣಪತಿ ನಾಯಕ ಎಂಬುವವರು ಈ ಇತಿಹಾಸ ಕೆದಕಿ ಮಂಡಿಸಿದ್ದರು. 2017 ರಲ್ಲಿ ಆಗಿನ ಸಂಸದರ ನೇತೃತ್ವದಲ್ಲಿ ಕಡವಾಡದ ನಂದವಾಳದಲ್ಲಿ ವಿಜಯ ದಿವಸ ಆಚರಣೆ ಪ್ರಾರಂಭಿಸಲಾಯಿತು. ಇಂದಿಗೂ ನಡೆದುಕೊಂಡು ಬಂದಿದೆ.

ಮನೆ, ಮನೆಯ ಸಂಭ್ರಮದ ದಿನವಾಗಲಿ

ದೇಶದಲ್ಲಿ ಮೊಟ್ಟ ಮೊದಲು ಬ್ರಿಟಿಷರ ಧ್ವಜ ಇಳಿಸಿದ ದಿನದಂದು ಜಿಲ್ಲೆಯ, ರಾಜ್ಯದ ಮನೆ, ಮನೆಗಳಲ್ಲೂ ಸಂಭ್ರಮಾಚರಣೆ ನಡೆಯಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.

ಸೋದೆ ಸಾಮಂತ ಅರಸ ಸದಾಶಿವರಾಯರು ಬ್ರಿಟಿಷರ ಧ್ವಜ ಇಳಿಸಿ, ಅವರನ್ನು ಓಡಿಸಿದ ನೆನಪಿಗಾಗಿ ಕಡವಾಡ ನಂದವಾಳದಲ್ಲಿ ಬುಧವಾರ ಆಯೋಜಿಸಿದ್ದ ವಿಜಯ ದಿವಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸದ ಮಹತ್ವದ ಘಟನೆಯೊಂದು ಯಾರಿಗೂ ತಿಳಿಯದೇ ಅಳಿದು ಹೋಗುತ್ತಿದೆ. ನಮ್ಮ ಪೂರ್ವಜರ ಹೋರಾಟದ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಯಬೇಕು ಎಂಬ ಉದ್ದೇಶದಿಂದ ನಾವು ಇಲ್ಲಿ ಪ್ರತಿ ವರ್ಷ ವಿಜಯೋತ್ಸವ ಆಚರಿಸುತ್ತಿದ್ದೇವೆ ಎಂದರು.

ಕಡವಾಡ ಗ್ರಾಪಂ ಅಧ್ಯಕ್ಷ ಆನಂದು ನಾಯ್ಕ ಮಾತನಾಡಿ, ಕಡವಾಡದಲ್ಲಿ ಬ್ರಿಟಿಷರ ವಸಾಹತು ಇತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಆದರೆ, ಸದಾಶಿವರಾಯರ ಇತಿಹಾಸ ಎಲ್ಲೂ ಉಳಿದಿಲ್ಲ. ಅದನ್ನು ಕೆದಕಿ ಅಧ್ಯಯನ ನಡೆಸಬೇಕು ಎಂದರು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್,ಗ್ರಾಪA ಉಪಾಧ್ಯಕ್ಷೆ ರಿತಿಕಾ ಹುಲಸ್ವಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಪ್ರಮುಖರಾದ ಪ್ರಭಾಕರ ಮಾಳ್ಸೇಕರ್, ಸಂಜಯ ನಾಯ್ಕ, ಬಾಬು ಬಾಳ್ಸೇಕರ್, ಉಲ್ಲಾಸ ರೇವಣಕರ್, ಗಜು ನಾಯ್ಕ ಇದ್ದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ಸ್ವಾಗತಿಸಿದರು. ಅಗ್ನಿವೀರರಾಗಿ ಆಯ್ಕೆಯಾದ ವಿಶಾಲ ಮಾಹೇಕರ್, ಎನ್‌ಸಿಸಿ ನವದೆಹಲಿಯ ಗಣರಾಜ್ಯೋತ್ಸವ ಪರೇಡ್‌ಗೆ ಹೋಗಿ ಬಂದಸಾಹಿಲ್ ಲೋಲೇಕರ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net