ರಾಮಕೃಷ್ಣ ಮಿಶನ್ ಆಶ್ರಮದಲ್ಲಿ ದುರ್ಗಾಷ್ಟಮಿ

img_20250929_2041212386595964335319632.jpg
Published on

ಬೆಳಗಾವಿ : ಇಲ್ಲಿನ ಕೋಟೆ ಆವರಣದಲ್ಲಿನ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಸೆ.30 ರಂದು ಶ್ರೀ ದುರ್ಗಾಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 6.15ಕ್ಕೆ ಉಷಾ ಕೀರ್ತನೆ, 8ಕ್ಕೆ ವಿಶೇಷ ಪೂಜೆ, 9.30ಕ್ಕೆ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, 10.15ಕ್ಕೆ ಹೋಮ ಮತ್ತು ವೇದಘೋಷ, 12ಕ್ಕೆ ಪ್ರವಚನ, 12.45ಕ್ಕೆ ಪುಷ್ಪಾಂಜಲಿ ಮತ್ತು ನಾಮ ಸಂಕೀರ್ತನೆ, 1.15ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ಜರುಗಲಿದೆ.
ಸಂಜೆ 6ಕ್ಕೆ ಶ್ರೀದೇವಿ ಸ್ತುತಿ, 6.30ಕ್ಕೆ ಶ್ರೀರಾಮಕೃಷ್ಣರಿಗೆ ಆರತಿ, 7ಕ್ಕೆ ಶ್ರೀ ದುರ್ಗಾ ಮಾತೆಗೆ ವಿಶೇಷ ಆರತಿ, ಭಜನೆ ಮತ್ತು ನಾಮಾವಳಿ ಇದೆ. ನವರಾತ್ರಿ ಪ್ರಯುಕ್ತ ಪ್ರತಿದಿನ ಅ. 2 ರವರೆಗೆ ಸಂಜೆ ಪಾರಾಯಣ ಇರುತ್ತದೆ ಎಂದು ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net