ಅಂಕಲಗಿ ಪಟ್ಟಣದಲ್ಲಿ ವಿಜಯದಶಮಿ ಕಾರ್ಯಕ್ರಮ

IMG-20250929-WA0157.jpg
Published on

ಬೆಳಗಾವಿ: ಗೋಕಾಕ ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಸೆಪ್ಟಂಬರ, 30 ರಂದು (ಮಂಗಳವಾರ) ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜಯದಶಮಿ ನಿಮಿತ್ಯವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ.

ಡೋಳ್ಳಿನ ವಾಲಗ, ಡೋಳ್ಳಿನ ಪದಗಳು ಹಾಗೂ ಇನ್ನಿತರ ಕಾರ್ಯಕ್ರಮಗಳು ರಾತ್ರಿ 8 ಗಂಟೆಗೆ ಜರುಗಲಿವೆ. ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ಹಣಬರಟ್ಟಿ ಶ್ರೀ ಮಹಾಲಕ್ಷ್ಮಿ ದೇವತೆಗಳು ಅ.೦1 ರಂದು (ಬುಧವಾರ) ಸಂಜೆ 5 ಗಂಟೆಗೆ ಪಲ್ಲಕಿಯೊಂದಿಗೆ ಅಗ್ನಿ ಹಾಯಲಿವೆ.

ಇದರಲ್ಲಿ ಭಾಗವಹಿಸಿ ಸಮಸ್ತ ಭಕ್ತಾಧಿಗಳು ದೇವಿ ಕೃಪೆಗೆ ಪಾತ್ರರಾಗಿ, ಅನ್ನ ಪ್ರಸಾದ ಪಡೆಯಬೇಕು ಎಂದು ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದ ಪಂಚ ಕಮಿಟಿಯ ಅಧ್ಯಕ್ಷ ಲಕ್ಕಪ್ಪ ಪೂಜಾರಿ ಅವರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net