

ಹುಬ್ಬಳ್ಳಿ: ಇಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಆಶ್ರಯದಲ್ಲಿ ಮೂರುಸಾವಿರ ಮಠದ ಸಭಾಭವನದಲ್ಲಿ ಭಾನುವಾರ ವಿಜಯ ಭಾರತ ಪುಸ್ತಕ ಬಿಡುಗಡೆ ಮಾಡಲಾಯಿತು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮನುಷ್ಯ ಇಂದಿನ ಪೈಪೋಟಿ ಜೀವನದಲ್ಲಿ ಬದುಕಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ತಾಳ್ಮೆ, ಸಹನೆ, ಪ್ರೀತಿ, ವಾತ್ಸಲ್ಯದಿಂದಲೂ ದೂರಾಗುತ್ತಿದ್ದಾನೆ. ಆದರೆ, ಓದುವ ಹವ್ಯಾಸ ಇದ್ದರೆ ಜೀವನದಲ್ಲಿ ನೆಮ್ಮದಿ, ಶಾಂತಿ ಉಂಟಾಗುತ್ತದೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ಏಕತೆ, ಮಾನವೀಯ ಮೌಲ್ಯಗಳಿಂದ ಕೂಡಿದಾಗ ಸಂಘಟನೆ ಬೆಳೆಯಲು ಸಾಧ್ಯ. ಸುಮಾರು 48 ವರ್ಷದಿಂದ ಮಹಾಮಂಡಳವು ಸಲ್ಲಿಸುತ್ತಿರುವ ಸೇವೆ ಅರ್ಥರ್ಪೂಣವಾಗಿದೆ. ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವುದರಿಂದ ನಾಡಿನಲ್ಲಿ ಜನಪ್ರಿಯತೆ ಗಳಿಸಿದೆ ಎಂದರು.
ವಿಜಯ ಭಾರತ ಕೃತಿಯ ಸಂಪಾದಕಿ ಸಾಧನಾ ಪೂಜಾರ ಅವರು ಮಾತನಾಡಿ, ಪುಸ್ತಕವು ಒಳ್ಳೆಯ ಲೇಖನ, ಮಾಹಿತಿಗಳನ್ನು ಒಳಗೊಂಡಿದೆ ಎಂದರು. ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಮಿಸ್ ಯೂನಿವರ್ಸಲ್ ಪಿಟೈಟ್ ಡಾ. ಶ್ರುತಿ ಹೆಗಡೆ ಮಾತನಾಡಿದರು.
ಜೀವ್ಹೇಶ್ವರ ಕೋ- ಆಪ್ ಸೊಸೈಟಿ ನಿರ್ದೇಶಕ ಶ್ರೀನಿವಾಸ ಏಕಾಬೋಟೆ, ಬಣಗಾರ ಸಮಾಜದ ಅಧ್ಯಕ್ಷ ಅನಿಲ ಕವಿಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ, ಶಾಂತರಾಜ ಪೋಳ, ಅಕ್ಕಮ್ಮಕಂಬಳಿ, ಪುಷ್ಪಾ ಹಿತ್ತಾಳಿ, ರೇಖಾ ಆಪ್ಟೆ, ಸ್ಮಿತಾ ಸಂಕಣ್ಣವರ, ಡಾ. ಮಂಜುಳಾ ಹತ್ತಿಮತ್ತೂರ, ಸಂಗೀತಾ ದೇವದಾಸ, ಸುವರ್ಣ ಪಾಟೀಲ ಇತರರು ಇದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿದ್ದರು.
ಸುಷ್ಮಾ ಕೊಂಗಿ ತಂಡದಿಂದ ಭರತನಾಟ್ಯ, ಚಂದ್ರಶೇಖರ ಗಾಣಿಗೇರ, ಸಂತೋಷ ಕಟ್ಟಿ, ಸುಧೀಂದ್ರ ಜಹಾಗಿರದಾರ, ಅನಿತಾ ಜಡಿ, ಸುನೀತಾ ಹಬೀಬ್, ಸರಸ್ವತಿ ಮೆಹರವಾಡೆ ಇವರಿಂದ ಸುಗಮ ಸಂಗೀತ ಜರುಗಿತು.
ಸವಿತಾ ಚಂದನಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯತ್ರಿ ನೆಲ್ಲಿಕೊಪ್ಪ ನಿರೂಪಿಸಿದರು. ರೂಪಾ ಅಂಗಡಿ ವಂದಿಸಿದರು.