ಹಿಂದು ಸಂಸ್ಕೃತಿ ರಕ್ಷಣೆಗೆ ವಿಹಿಂಪ

Koppa
ವಿಹಿಂಪ ಹಮ್ಮಿಕೊಂಡಿದ್ದ ಶೌರ್ಯ ಜಾಗರಣ ರಥಯಾತ್ರೆಯನ್ನು ಕಾರ್ಯಕರ್ತರು ಕೊಪ್ಪ ಬಸ್ ನಿಲ್ದಾಣದಲ್ಲಿ ಸ್ವಾಗತಿಸಿದರು.
Published on

ಕೊಪ್ಪ: ಹಿಂದು ಸಂಸ್ಕೃತಿ ರಕ್ಷಣೆಯಲ್ಲಿ ವಿಶ್ವ ಹಿಂದು ಪರಿಷತ್ ನಿರತವಾಗಿದೆ. ಪರಿಷತ್ ನಡೆಸಿದ ಹೋರಾಟಗಳಿಗೆ ಜಯ ಸಿಕ್ಕಿದೆ ಎಂದು ಬಜರಂಗದಳ ವಿಭಾಗ ಸಂಚಾಲಕ್ ಶಾಶಂಕ್ ಹೇರೂರು ತಿಳಿಸಿದರು.

ವಿಎಚ್‌ಪಿ 60ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶೌರ್ಯ ಜಾಗರಣ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದು ಸಮಾಜ, ಸಂಸ್ಕೃತಿ ರಕ್ಷಣೆ ಕಾರ್ಯಗಳು ವಿಹಿಂಪ ಹಾಗೂ ಬಜರಂಗದಳದ ಕಾರ್ಯಕರ್ತರು ಮಾಡುತ್ತಿದ್ದಾರೆ. ರಾಮ ಮಂದಿರ ಹೋರಾಟ ಆರಂಭಿಸಿದ್ದು ವಿಹಿಂಪ. ರಾಮ ಸೇತು ವಿಷಯದಲ್ಲಿ ವಿಹಿಂಪಗೆ ಜಯ ಸಿಕ್ಕಿದೆ. ದತ್ತಪೀಠ ಹೋರಾಟವನ್ನೂ ಆರಂಭಿಸಿದ್ದು ವಿಎಚ್‌ಪಿ ಎಂದರು.
ವಿಹಿಂಪ ನೇತೃತ್ವ ವಹಿಸಿದ ಹೋರಾಟಗಳಿಗೆ ಕಾರ್ಯಕರ್ತರು ಬಜರಂಗಿಗಳಂತೆ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ ಸಂಘಟನೆ ಹೋರಾಟಗಳಿಗೆ ಜಯವಾಗುತ್ತದೆ. ಲವ್ ಜಿಹಾದ್, ಮತಾಂತರದ ವಿರುದ್ಧ ನಿರಂತರವಾಗಿ ಸಂಘಟನೆ ಹೋರಾಡುತ್ತಿದೆ. ಹಿಂದು ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದೆ ಎಂದರು.
ವಿಹಿಂಪ, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಶೌರ್ಯ ಜಾಗರಣ ರಥ ಸ್ವಾಗತಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ಅಜಿತ್ ಕುಲಾಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ, ಎಚ್.ಆರ್.ಜಗದೀಶ್, ಶರತ್ ಕಾರಂಗಿ, ಅಜಿತ್ ಬಿಕ್ಳಿ, ಕಿರಣ್ ಮಡಬಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net