ವಿಹಾನ್ ಹಾರ್ಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ೨೦ರಂದು

IMG_20230817_120750_251-1.jpg
Published on

ಹುಬ್ಬಳ್ಳಿ: ಇಲ್ಲಿಯ ಅಕ್ಷಯ ಕಾಲನಿ ನಾಲ್ಕನೇ ಹಂತದಲ್ಲಿರುವ ಗಾರ್ಡೇನಿಯಾ ಅಪಾರ್ಟಮೆಂಟ್ ಬಳಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಹೃದಯದ ಸಂಪೂರ್ಣ ಕಾಳಜಿ ವಹಿಸುವ ವಿಹಾನ್ ಹಾರ್ಟ್ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿಮಿರ್ಸಲಾಗಿದೆ ಎಂದು ವಿಹಾನ್ ಹಾರ್ಟ್ ಕೇರ್ ಪೆವೇಟ್ ಲಿಮಿಟೆಡ್‌ ಚೇರ್ಮನ್, ಅಂತಾರಾಷ್ಟ್ರೀಯ ಹೃದಯ ತಜ್ಞ ಡಾ. ವಿಜಯಕೃಷ್ಣ ಕೋಳೂರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 20ರಂದು ಬೆಳಗ್ಗೆ 11ಕ್ಕೆ ಆಸ್ಪತ್ರೆಯ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ನೆರವೇರಿಸುವರು. ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶಾಸಕರು, ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳುವರು ಎಂದರು.

ಕ್ಯಾತ್ಲ್ಯಾಬ್: ಅತ್ಯಾಧುನಿಕ ತಂತ್ರಜ್ಞಾನದ ಕ್ಯಾತ್ ಲ್ಯಾಬ್, ಕಾಡಿರ್ಯಾಕ್ ಸರ್ಜರಿ ಘಟಕ, ಕಾಡಿರ್ಯಾಕ್ ಇಂಟೆನ್ಸಿವ್ ಕೇರ್ ಯುನಿಟ್ಗಳಿಂದ ಸುಸಜ್ಜಿತವಾದ ಆಸ್ಪತ್ರೆ ಇದಾಗಿದೆ. 2008ರಿಂದ ಹುಬ್ಬಳ್ಳಿ&ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ವೈದ್ಯಕಿಯ ಸೇವೆಯಿಂದಾಗಿ ಗುರುತಿಸಿಕೊಂಡಿದ್ದೇವೆ. ಜನಸಾಮಾನ್ಯರಿಗೆ ಕೈಗೆಟುವ ವೆಚ್ಚದಲ್ಲಿ ವೈದ್ಯಕಿಯ ಸೇವೆ ನೀಡುವ ಉದ್ದೇಶ ಹೊಂದಿದ್ದೇವೆ ಎಂದು ಡಾ. ವಿಜಯಕೃಷ್ಣ ಕೋಳೂರ ಹೇಳಿದರು.

ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡವಿದ್ದು, ಎಲ್ಲ ರೀತಿಯ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಪರಿಣಿತರಾಗಿದ್ದಾರೆ. ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟ್, ಜನ್ಮಜಾತ ಹೃದಯ ಕಾಯಿಲೆಗಳಿಗೆ ಸಾಧನ ಚಿಕಿತ್ಸೆ, ಪೇಸ್ಮೇಕರ್ ಅಳವಡಿಕೆ, ಹೃದಯ ವೈಲ್ಯಕ್ಕೆ ಸಾಧನ ಚಿಕಿತ್ಸೆ, ಇಪಿ ಸೌಲಭ್ಯ, ಆರ್ಎ್ ಅಬ್ಲೇಷನ್, ಐಸಿಡಿ, ಸಿಆರ್ಟಿ, ಬಲೂನ್ ಮಿಟ್ರಲ್ ವಾಲ್ವೋಟಮಿ, ಇಸಿಜಿ, 4ಡಿ ಈಕೋ, ಸಿಟಿ ಕೊರೊನರಿ ಆಂಜಿಯೋಗ್ರಾಫಿ, ಎಕೋಕಾಡಿರ್ಯೋಗ್ರಾಫಿ ಸೇರಿದಂತೆ 24 ಗಂಟೆ ಎಬಿಪಿಎಂ ಸೇರಿ ಎಲ್ಲ ಹೃದಯ ಆರೈಕೆ, ಸರ್ಜರಿಗಳನ್ನು ವಿಹಾನ್ನಲ್ಲಿ ಮಾಡಲಾಗುತ್ತದೆ ಎಂದರು.

ಹೆಲ್ತ್ ಇನ್ಸುರನ್ಸ್, ಸರ್ಕಾರದ ಯೋಜನೆಗಳಾದ ಆಯುಷ್ಮಾನ ಭಾರತ, ಜ್ಯೋತಿ ಸಂಜೀವಿನಿ ಮುಂತಾದ ಯೋಜನೆಗಳಡಿ ಇಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ವೈದ್ಯರು ತಿಳಿಸಿದರು.
ಸಂಸ್ಥೆಯ ನಿರ್ದೇಶಕಿ ಶ್ವೇತಾ ಕೋಳೂರ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net