ಮಂಡ್ಯ: ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ತಾಲೂಕಿನ ಬಸರಾಳು ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ ಮಕ್ಕಳು ಪ್ರಥಮ ಬಹುಮಾನ ಪಡೆದಿದ್ದಾರೆ.
9ನೇ ತರಗತಿ ವಿದ್ಯಾರ್ಥಿಗಳಾದ ಪ್ರಿಯಾ, ಸಿ.ಕೆ.ಮೌಲ್ಯ, 8ನೇ ತರಗತಿ ವಿದ್ಯಾರ್ಥಿಗಳಾದ ಯಶಸ್ವಿನಿ, ಚಿತ್ರಶ್ರೀ, ನವ್ಯಶ್ರೀ ಮೈಸೂರು ವಿಭಾಗದಿಂದ ಪ್ರಥಮ ಬಹುಮಾನ ಪಡೆದಿದ್ದಾರೆ. ಅಂತೆಯೇ ರಚನಾತ್ಮಕ ಮತ್ತು ಪ್ರವಾಹ ನಿಯಂತ್ರಣ ಪ್ರಾತ್ಯಕ್ಷಿಕೆಗೆ ಮೂರು ಲಕ್ಷ ರೂ ಬಹುಮಾನ ಬಂದಿದೆ.
ಪ್ರಶಸ್ತಿ ವಿಜೇತ ಮಕ್ಕಳನ್ನು ಶಾಲೆಯ ಪ್ರಾಚಾರ್ಯ ಎಚ್.ಬಿ.ಪುರುಷೋತ್ತಮ, ಮಾರ್ಗದರ್ಶಿ ಶಿಕ್ಷಕ ರವಿಕುಮಾರ್, ಭಾರ್ಗವಿ ಹಾಗೂ ಶಾಲೆಯ ಸಿಬ್ಬಂದಿ ಅಭಿನಂದಿಸಿದ್ದಾರೆ.