ಅವಮಾನಗಳ ವಿರುದ್ಧ ಜಾಗೃತ ಮನಸ್ಥಿತಿ

pdb-2
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ವಾಸ್ತುತಜ್ಞರ ನೆಪದಲ್ಲಿ ಪ್ರಾಚೀನ ಪರಂಪರೆಯ ಶಿಲ್ಪಿಗಳಿಗೆ ಮಾನ್ಯತೆ ನೀಡದಿರುವುದು ಹಿಂದು ಧರ್ಮಕ್ಕೆ ಅವಮಾನ ಮಾಡಿದಂತೆ. ವಿಶ್ವಕರ್ಮರು ಇಂತಹ ಅವಮಾನಗಳ ವಿರುದ್ಧ ಜಾಗೃತ ಮನಸ್ಥಿತಿ ಬೆಳೆಸಿಕೊಳ್ಳುವಂತೆ ಸಾಹಿತಿ ಚಂದ್ರಶೇಖರ ಮಂಡೆಕೋಲು ಕರೆ ನೀಡಿದರು.

ವಿಶ್ವಬ್ರಾಹ್ಮಣ ಸಮುದಾಯ ಸಾಮರ್ಥ್ಯಾಭಿವೃದ್ಧಿ ಸಮಿತಿ ಕಾಪು ವತಿಯಿಂದ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ಜಾಗೃತ ಚಿಂತನ ಮಂಥನ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಾಪು ಗಣೇಶ ಆಚಾರ್ಯ ಉದ್ಘಾಟಿಸಿದರು. ವಿಶ್ವಬ್ರಾಹ್ಮಣ ಸಮುದಾಯ ಸಾಮರ್ಥ್ಯಾಭಿವೃದ್ಧಿ ಸಮಿತಿ ಸಂಚಾಲಕ ಕಾಪು ಶ್ರೀಕಾಂತ ಬಿ.ಆಚಾರ್ಯ ಮಾತನಾಡಿದರು. ರಂಗನಿರ್ದೇಶಕ ಬಾಸುಮಾ ಕೊಡಗು ಲಾಂಚನ ಬಿಡುಗಡೆಗೊಳಿಸಿದರು.

ಸ್ವರ್ಣ ಶಿಲ್ಪಿಗಳಾದ ಕಿಶನ್ ಆಚಾರ್ಯ ಕೋಟೇಶ್ವರ, ನಾಗರಾಜ ಆಚಾರ್ಯ ಪೆರ್ಡೂರು, ಅರವಿಂದ ಆಚಾರ್ಯ ಗರಡಿಮಜಲು, ಕಾಷ್ಠಶಿಲ್ಪಿ ಕಾರ್ತಿಕ್ ಆಚಾರ್ಯ, ಶಿಲಾ ಶಿಲ್ಪಿ ನಾಗೇಶ್ ಆಚಾರ್ಯ ಅಜ್ಜರಕಾಡು ಅವರಿಗೆ ಶಿಲ್ಪ ರತ್ನಾಕರ ಬಿರುದು ಪ್ರದಾನ ಮಾಡಲಾಯಿತು. ಸ್ವರ್ಣ ವಿನ್ಯಾಸಕಾರ ಪಿ.ಗೋವಿಂದ ಆಚಾರ್ಯ ಕಾಪು, ದಾರು ಶಿಲ್ಪಿ ಪುಟ್ಟಣ್ಣ ಆಚಾರ್ಯ ಇನ್ನಂಜೆ, ಸುಬ್ರಾಯ ಆಚಾರ್ಯ ಇನ್ನಂಜೆ, ಜನಾರ್ದನ ಆಚಾರ್ಯ ಕಲ್ಯಾಲು, ಕಮ್ಮಾರಿಕೆ ರವೀಂದ್ರ ಆಚಾರ್ಯ ಕೊಪ್ಪಲಂಗಡಿ, ಲೋಹಶಿಲ್ಪಿ ಪ್ರಭಾಕರ ಆಚಾರ್ಯ ಬಿಳಿಯಾರು, ನಾಟಕ ರಂಗ ದಿವಾಕರ ಕಟೀಲು, ಪಲ್ಲವಿ ಕೊಡಗು, ಕುಣಿತ ಭಜನೆ ಶಿಕ್ಷಕ ಶ್ರೀಧರ ಆಚಾರ್ಯ ಪಾದೆಬೆಟ್ಟು ಅವರಿಗೆ ಕಲಾ ರತ್ನಾಕರ ಪುರಸ್ಕಾರ, ಬಾಲಕೃಷ್ಣ ಆಚಾರ್ಯ ಬೆಳಪು, ಜಯರಾಮ ಆಚಾರ್ಯ ಕೊಪ್ಪಲಂಗಡಿ, ವಿಜಯ ಆಚಾರ್ಯ ಉಚ್ಚಿಲ, ಡಾ.ಮಿಥುನ್ ಎಸ್.ಪುಷ್ಕರ್ ಮಲ್ಲಾರ್, ದಿನೇಶ್ ಆಚಾರ್ಯ ಕಾಪು, ಸಂದೀಪ್ ಆರ್.ಬಿ., ಚಂದ್ರಯ್ಯ ಆಚಾರ್ಯ ಮಲಂಗೋಳಿ, ವಾದಿರಾಜ್ ಆಚಾರ್ಯ ಇನ್ನಂಜೆ, ರವೀಂದ್ರ ಶರ್ಮ, ರತ್ನಾಕರ ಆಚಾರ್ಯ ಪಳ್ಳಿ ನಿಂಜೂರು ಅವರಿಗೆ ಸೇವಾರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಮಾರಾಳಿ, ಕುತ್ಯಾರು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಆಚಾರ್ಯ ಮುಕ್ರುಗುತ್ತು, ಕವಿತಾ ಮುದೂರು, ದಿವಾಕರ ಅಗ್ನಿಹೋತ್ರಿ ಬಂಟಕಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಬಿದ್ರಿ ವಲಯಾಧ್ಯಕ್ಷ ಭುಜಂಗ ಆಚಾರ್ಯ, ನಾಗಲಿಂಗಸ್ವಾಮಿ ಯುವಕ ಸೇವಾದಳ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಕೈಪುಂಜಾಲು, ಶ್ರೀ ಕಾಳಿಕಾ ಮಹಿಳಾ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಕಾಂತ್ ಆಚಾರ್ಯ ಇದ್ದರು. ಸುರೇಶ ಆಚಾರ್ಯ ಮಂಚಕಲ್ಲು ಸ್ವಾಗತಿಸಿದರು. ದಾಮೋದರ ಶರ್ಮ ನಿರೂಪಿಸಿ, ವಂದಿಸಿದರು.

ವಿಶೇಷ ಅಭಿನಂದನೆ

ಮಾರಿಗುಡಿಗಳ ಗೊಂಬೆ ರಚನೆ ಮಾಡುವ ಗಂಗಾಧರ ಆಚಾರ್ಯ ಕಾಪು, ವಾಮನ ಆಚಾರ್ಯ ಉಳಿಯಾರಗೋಳಿ, ಮಂಜುನಾಥ ಆಚಾರ್ಯ ಉಳಿಯಾರಗೋಳಿ, ಯುವ ಪ್ರತಿಭೆಗಳಾದ ಪ್ರದೀಪ್ ಆಚಾರ್ಯ, ಶ್ರೀನಿಧಿ ಪ್ರಸಾದ್, ಚಿತ್ರನಟ ಕರುಣಾಕರ ಆಚಾರ್ಯ ಉದ್ಯಾವರ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net