ವಿಷ್ಣು ಸಹಸ್ರನಾಮ ಪಠಣದಿಂದ ವಿಘ್ನ ನಾಶ

2 - Copy
Published on

ಮೈಸೂರು: ವಿಷ್ಣು ಸಹಸ್ರನಾಮ ಪಠಣದಿಂದ ವಿವಿಧ ರೋಗ, ಬಂಧನ, ಭಯ, ಆಪತ್ತು ಎಂಬ ವಿಘ್ನಗಳಿಂದ ದೂರವಾಗಹುದು ಎಂದು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹೇಳಿದರು.
ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಮೈಸೂರು ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಪರಮ್ಮಾತನ ಒಂದೇ ತತ್ವದ ಕಡೆ ನಮ್ಮನ್ನೂ ತೆಗೆದುಕೊಂಡು ಹೋಗುವುದಿದ್ದರೆ ಅದು ಭಗವದ್ಗಿತೆ ಮತ್ತು ವಿಷ್ಣು ಸಹಸ್ರನಾಮ ಪಠಣ ಮಾತ್ರ ಎಂದರು. ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ್ ಫೆಡರೇಷನ್ ಪ್ರಪಂಚದ ನಾನಾ ರಾಷ್ಟ್ರಗಳಲ್ಲಿ ಹಾಗೂ ಭಾರತದ ಉದ್ದಗಲಕ್ಕೂ ವಿಷ್ಣು ಸಹಸ್ರನಾಮದ ಪ್ರಸರಣಕ್ಕಾಗಿಯೇ ಮೀಸಲಾದ ಸಂಸ್ಥೆಯಾಗಿದೆ. ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ಸೇವೆ ಅಪಾರ ಎಂದರು.

ಡಾ.ಭಾಷ್ಯಂ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ್ ಸಂಸ್ಥೆಯ ಸಂಸ್ಥಾಪಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ವಿಶ್ವ ವಿಪ್ರತ್ರಯೀ ಪರಿಷತ್ ಅಧ್ಯಕ್ಷ ಎಸ್.ರಘುನಾಥ್, ಸಂಸ್ಥೆಯ ಮೈಸೂರು ವಿಭಾಗದ ಸಂಚಾಲಕ ರಮಾಕಾಂತ ಶೆಣೈ, ಎಚ್.ಕೆ.ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ವಿ.ಭರದ್ವಾಜ್, ಡಾ.ಜಗನ್ನಾಥ್ ಶೆಣೈ, ಮಂಗಳಾ ಭಾಸ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net