ಪ್ರೊಜೆಕ್ಟರ್ ಮೂಲಕ ವೀಕ್ಷಣೆ

23 smg 7
ಶಿವಮೊಗ್ಗ ವಿನೋಬನಗರ ಶ್ರೀ ಶನೈಶ್ಚರ ದೇವಾಲಯದ ಆವರಣದಲ್ಲಿ ಚಂದ್ರಯಾನ-3 ಲ್ಯಾಂಡಿಂಗ್‌ನ್ನು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಪತ್ನಿ ಜಯಲಕ್ಷ್ಮೀ ಸೇರಿದಂತೆ ಹಲವರೊಂದಿಗೆ ಕಣ್ತುಂಬಿಕೊಂಡರು.
Published on

ಶಿವಮೊಗ್ಗ: ವಿನೋಬನಗರ ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್‌ನಿಂದ ಶ್ರೀ ವರಸಿದ್ಧಿ ವಿನಾಯಕ ಹಾಗೂ ಶ್ರೀ ಶನೈಶ್ಚರ ದೇವಾಲಯದ ಆವರಣದಲ್ಲಿ ಭಾರತದ ಐತಿಹಾಸಿಕ ಕ್ಷಣ ಇಸ್ರೋದ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಆಗುವ ಕ್ಷಣವನ್ನು ನೂರಾರು ಮಂದಿ ಪ್ರೊಜೆಕ್ಟರ್ ಮೂಲಕ ಕಣ್ತುಂಬಿಕೊಂಡರು.
ಅದಕ್ಕೂ ಪೂರ್ವದಲ್ಲಿ ಯಾವುದೇ ವಿಘ್ನಗಳು ಬಾರದಂತೆ ಲ್ಯಾಂಡಿಂಗ್ ಆಗಲೆಂದು ಮಾಜಿ ಡಿಸಿಎಂ, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ವಿಶೇಷ ಪೂಜೆ, ಅರ್ಚನೆ ನಂತರ ಸಾಮೂಹಿಕ ಭಜನಾ ಕಾರ್ಯಕ್ರಮವು ನಡೆಯಿತು. ಅರ್ಥಶಾಸ್ತ್ರಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಸಹ ನಡೆಯಿತು.
ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ: ಬಿಜೆಪಿ ಕಚೇರಿಯಲ್ಲೂ ಬುಧವಾರ ಸಂಜೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಚಂದ್ರಯಾನ-3 ಯಶಸ್ವಿಯಾಗುತ್ತಿದ್ದಂತೆ ಕಚೇರಿಯಲ್ಲೇ ಕಾಯಕರ್ತರು ಚಪ್ಪಾಳೆ ಮೂಲಕ ಸಂಭ್ರಮಿಸಿದರು. ಬಳಿಕ ಪರಸ್ಪರ ಶುಭ ಕೋರಿದರು. ಮುಖಂಡರಾದ ಗಿರೀಶ್ ಪಟೇಲ್, ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಎಸ್.ಜ್ಞಾನೇಶ್ವರ್, ಮಾಲ್ತೇಶ್, ಹೃಷಿಕೇಶ್ ಪೈ, ಸೀತಾಲಕ್ಷ್ಮೀ ಮತ್ತಿತರಿದ್ದರು.
ಐತಿಹಾಸಿಕ ಯಶಸ್ಸನ್ನು ಜಿಲ್ಲಾ ಪೊಲೀಸರು ವಿಶೇಷವಾಗಿ ಆಚರಿಸಿದರು. ಎಸ್ಪಿ ಕಚೇರಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಪ್ರಭು ಸೇರಿದಂತೆ ಕಚೇರಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net