ವಸತಿ ನಿಲಯ ನಿರ್ಮಾಣಕ್ಕೆ ಮೀಸಲಿಟ್ಟ ಸ್ಥಳ ವೀಕ್ಷಣೆ

visit
Published on

ಮಡಿಕೇರಿ: ಕೊಡಗಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉನ್ನತ ಮಟ್ಟದ ಕ್ರೀಡಾ ತರಬೇತಿ ವಸತಿ ನಿಲಯ, ವಿ.ಬಾಡಗದಲ್ಲಿ ಮೀಸಲಿಟ್ಟಿರುವ ಸ್ಥಳವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ರಾಜ್ಯಸಭಾ ಸದಸ್ಯರಾದ ಅಜಯ್ ಮಾಕನ್ ಅವರೊಂದಿಗೆ ವೀಕ್ಷಣೆ ಮಾಡಿದರು.

ವೀಕ್ಷಣೆ ಹಾಗೂ ಪರಿಶೀಲನೆ ಸಂದರ್ಭದಲ್ಲಿ ಶಾಸಕರು ರಾಜ್ಯಸಭಾ ಸದಸ್ಯರಿಗೆ ಈ ಸ್ಥಳದಲ್ಲಿ ಉನ್ನತ ಮಟ್ಟದ ತರಬೇತಿ ವಸತಿ ನಿಲಯ ಸ್ಥಾಪಿಸಿದಲ್ಲಿ ರಾಜ್ಯದ ಹಾಗೂ ಅದರಲ್ಲೂ ವಿಶೇ?ವಾಗಿ ಕೊಡಗಿನ ಕ್ರೀಡಾಪಟುಗಳಿಗೆ ಆಗುವ ಅನುಕೂಲದ ಬಗ್ಗೆ ಹಾಗೂ ಇಲ್ಲಿ ಕಲ್ಪಿಸಲು ಉದ್ದೇಶಿಸಿರುವ ಕ್ರೀಡಾ ಸವಲತ್ತುಗಳ ಬಗ್ಗೆ ವಿವರಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣನ, ತಾವು ಈ ಹಿಂದೆ ಸಂಸದರೊಂದಿಗೆ ಬೇಡಿಕೆ ಇಟ್ಟ ಸಂದರ್ಭ ಅವರು ಕೊಡಗು ಜಿಲ್ಲೆಯ ಬಗ್ಗೆ ಹೆಮ್ಮೆಯಿಂದ ಕ್ರೀಡೆ ಮತ್ತು ಸೈನ್ಯಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುತ್ತಾ ಖಂಡಿತವಾಗಿಯೂ ತನ್ನ ಕೈಲಾದ ಅನುದಾನವನ್ನು ಒದಗಿಸುವ ಭರವಸೆ ನೀಡಿದ್ದರು. ಅದೇ ರೀತಿ ಇಂದು ಆಗಮಿಸಿದ ಸಂಸದರು ಈ ಉನ್ನತ ಕ್ರೀಡಾ ತರಭೇತಿ ವಸತಿ ನಿಲಯಕ್ಕೆ ಮೀಸಲಿಟ್ಟ ೧೧.೨ ಎಕರೆ ಜಾಗವನ್ನು ವೀಕ್ಷಿಸಿದರಲ್ಲದೆ, ತನ್ನ ಅನುದಾನದಲ್ಲಿ ನೀಡಬಹುದಾದ ಎಲ್ಲಾ ಮೊತ್ತವನ್ನು ಈ ಕ್ರೀಡಾಂಗಣಕ್ಕೆ ನೀಡುವುದಾಗಿ ಭರವಸೆ ನೀಡಿದರು.

ಈಗಾಗಲೇ ನಿರ್ಮಾಣ ಕಾಮಗಾರಿಯ ಪೂರ್ವ ತಯಾರಿ ಪ್ರಗತಿಯಲ್ಲಿದ್ದು, ಸಮಯ ಒದಗಿ ಬಂದಲ್ಲಿ ಇದೇ ಬರುವ ನವೆಂಬರ್ ತಿಂಗಳು ಮಾನ್ಯ ಮುಖ್ಯಮಂತ್ರಿಗಳು, ಸಂಸದರಾದ ಅಜಯ್ ಮಾಕನ್ ಹಾಗೂ ಕ್ರೀಡಾ ಸಚಿವರನ್ನು ಈ ಭಾಗಕ್ಕೆ ಕರೆಯಿಸಿ ಅಧಿಕೃತವಾಗಿ ಕಾರ್ಯಕ್ರಮ ನಡೆಸುವ ಉದ್ದೇಶವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ತಿತೀರ ಧರ್ಮಜ ಉತ್ತಪ್ಪ, ಪಟ್ಟಡ ರಂಜಿ ಪೂಣಚ್ಚ, ವಿರಾಜಪೇಟೆ ತಹಶೀಲ್ದಾರ್ ಪ್ರವೀಣ್, ಕಂದಾಯ ಅಧಿಕಾರಿ ಹರೀಶ್, ಅರಣ್ಯ ಅಧಿಕಾರಿ ಗೋಪಾಲ್, ಕಂಜಿತಂಡ ಪೂವಣ್ಣ, ಕೋಲಿರ ಬೊಪ್ಪಣ್ಣ, ಗಿಣಿ ಮೊಣ್ಣಪ್ಪ, ಕಾಶಿ ಕಾರ್ಯಪ್ಪ, ಕೊಳತಂಡ ಮಾಚಯ್ಯ, ಚೇಂದ್ರಿಮಾಡ ನಂಜಪ್ಪ, ಲೋಹಿತ್, ಅಪ್ಪಣ್ಣ, ಸಾಧಾ, ಪಟ್ಟಡ ರಕ್ಷಿತ್ ಚಂಗಪ್ಪ, ಶಬೀರ್, ಕುಂಡಚೀರ ಮಂಜು ದೇವಯ್ಯ, ಮಹಾದೇವ, ಮಂಜುನಾಥ್, ಗಣೇಶ, ಕಾಳಪ್ಪ, ಹ್ಯಾರೀಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net