ಮರ ಬಿದ್ದು ಹಾನಿಯಾದ ಮನೆ ವೀಕ್ಷಣೆ

03¸sunti05 (1)
ಕೆಂಚೆಟ್ಟಿ ನಿವಾಸಿ ಎನ್.ಆರ್.ನಂಜಪ್ಪ ಅವರ ಹಾನಿಯಾದ ನಿವಾಸಕ್ಕೆ ಶಾಸಕ ಡಾ.ಮಂತರ್‌ಗೌಡ ಭೇಟಿ ನೀಡಿ ಪರಿಶೀಲಿಸಿದರು. ಕಿರಣ್ ಗೌರಯ್ಯ, ವಿ.ಪಿ.ಶಶಿಧರ್, ಶಿವಮ್ಮ ಮಹೇಶ್, ರಫೀಕ್‌ಖಾನ್ ಇದ್ದರು.
Published on

ಸುಂಟಿಕೊಪ್ಪ: ಭಾರಿ ಮರಬಿದ್ದು ಮನೆ ಹಾನಿಯಾಗಿದ್ದ ಕೆಂಚೆಟ್ಟಿ ಗ್ರಾಮದ ಎನ್.ಆರ್.ನಂಜಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಡಾ.ಮಂತರ್‌ಗೌಡ ಪರಿಶೀಲನೆ ನಡೆಸಿ, ಸಾಂತ್ವನ ಹೇಳಿದರು.

ಇತ್ತೀಚೆಗೆ ಭಾರಿ ಗಾಳಿ ಮಳೆಗೆ ಎನ್.ಆರ್. ನಂಜಪ್ಪ ಅವರ ವಾಸದ ಮನೆಯ ಮೇಲೆ ಹಿಂಬದಿ ಕಾಫಿ ತೋಟದ ಮರ ಬಿದ್ದು, ಛಾವಣಿ ಹಾಗೂ ಗೋಡೆ ಕುಸಿದು ನಷ್ಟ ಉಂಟಾಗಿತ್ತು. ಭಾನುವಾರ ಸಂಜೆ ಶಾಸಕರಾದ ಡಾ.ಮಂತರ್‌ಗೌಡ ಅವರು ಕಂದಾಯ ಅಧಿಕಾರಿಗಳೊಂದಿಗೆ ಕೆಂಚೆಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಅಲ್ಲದೆ ಸರ್ಕಾರದಿಂದ ಅದಷ್ಟು ಶೀಘ್ರದಲ್ಲಿ ಪರಿಹಾರ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಕಿರಣ್ ಗೌರಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ರಫೀಕ್‌ಖಾನ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಉಪತಹಸೀಲ್ದಾರ್ ಪ್ರಶಾಂತ್, ಸುಂಟಿಕೊಪ್ಪ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಉಷಾ, ಹಾಗೂ ಸಹಾಯಕಿ ಗೀತಾ, ಗ್ರಾ.ಪಂ. ಕರವಸೂಲಿಗಾರ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಮುಖಂಡ ವಿಲಿಯಂ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net