ವಿದ್ಯುತ್​ ತಗುಲಿ 320 ಮಾವಿನ ಗಿಡಗಳು ಸುಟ್ಟು ಕರಕಲು

Crime Logo
Published on

ಬಂಕಾಪುರ; ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ನಿಂದ ಹತ್ತಿಕೊಂಡ ಬೆಂಕಿಯಿಂದ 7ಲಕ್ಷ ರೂ. ಮೌಲ್ಯದ 320 ಮಾವಿನ ಗಿಡಗಳು ಸುಟ್ಟು ಕರಕಲಾದ ಘಟನೆ ಇಲ್ಲಿಗೆ ಸಮೀಪದ ನೀರಲಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮದ ರಾಜು ಚನ್ನಪ್ಪ ಲಮಾಣಿ (40) ಎಂಬುವರ ಗಿಡಗಳು ಸುಟ್ಟು ಹೋಗಿರುವುದು.

ಇವರ ಜಮೀನಿನಲ್ಲಿರುವ ಟಿಸಿಯಿಂದ ಹತ್ತಿಕೊಂಡ ಬೆಂಕಿ ಮಾವಿನ ಗಿಡಗಳಿಗೂ ತಗುಲಿದೆ. ಇದರಿಂದ ಇಡೀ ತೋಟದಲ್ಲಿದ್ದ 240 ಗಿಡ ಹಾಗೂ ಪಕ್ಕದ ರೈತ ಮಹದೇವಪ್ಪ ಎಂಬುವರ 80 ಮರಗಳು ಸುಟ್ಟು ಹೋಗಿವೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net