

ರಾಣೆಬೆನ್ನೂರ: ವಿದ್ಯುತ್ ಶಾರ್ಟ್ ಸಕ್ಯೂರ್ಟ್ನಿಂದ ಬೆಂಕಿ ಹತ್ತಿ ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲಾದ ಟನೆ ತಾಲೂಕಿನ ಹೊಸಚಂದಾಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಚಿಕ್ಕಹರಳಹಳ್ಳಿ ಗ್ರಾಮದ ಬಸಪ್ಪ ನಿಂಗಪ್ಪ ಕುದರಿಹಾಳ ಎಂಬುವರ ಮೆಕ್ಕೆಜೋಳದ ತೆನೆ ಸುಟ್ಟಿರುವುದು.
ಇವರು ಹೊಸ ಚಂದಾಪುರ ಗ್ರಾಮದ ಹೊರವಲಯದಲ್ಲಿ ಮೆಕ್ಕೆಜೋಳದ ತೆನೆಗಳನ್ನು ಒಕ್ಕಲು ಮಾಡುವ ಸಲುವಾಗಿ ಹಾಕಿದ್ದರು. ಈ ಸಮಯದಲ್ಲಿ ವಿದ್ಯುತ್ ಶಾರ್ಟ್ ಸಕ್ಯೂರ್ಟ್ನಿಂದ ಬೆಂಕಿ ತಗುಲಿ ಸುಟ್ಟು ಕರಕಲಾಗಿವೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ 20 ಕ್ವಿಂಟಾಲ್ನಷ್ಟು ಮೆಕ್ಕೆಜೋಳ ತೆನೆ ಸುಟ್ಟು ಹೋಗಿದ್ದವು ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.