

ಬ್ಯಾಡಗಿ: ಮನೆಗೆ ಕರೆಂಟ್ ಬಾರದ ಕಾರಣ ಲೈನ್ ದುರಸ್ತಿ ಪಡಿಸಲು ಹೋದ ಎಸ್ಸೆಸ್ಸೆಲ್ಸಿ ವಿದ್ಯಾಥಿರ್ಯೊಬ್ಬ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಲೋಹಿತ್ ಮಂಜಪ್ಪ ಬಟ್ಟಲಕಟ್ಟಿ (15) ಮೃತ ವಿದ್ಯಾಥಿರ್.
ಈತ ಮನೆಯಲ್ಲಿ ಕರೆಂಟ್ ಬಾರದ ಕಾರಣ ಮನೆ ಮುಂಭಾಗದ ವಿದ್ಯುತ್ ಕಂಬಕ್ಕೆ ಹಾಕಿದ್ದ ಲೈನ್ಅನ್ನು ಪರಿಶೀಲಿಸಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.