‘ವಿದ್ಯುತ್ 2024’ ಸಾಂಸ್ಕೃತಿಕ ಉತ್ಸವ

mysore
Published on

ಮೈಸೂರು: ನಗರದ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ (ವಿವಿಸಿಇ) ಸಂಸ್ಥೆಯಲ್ಲಿ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ವಿದ್ಯುತ್ 2024’ ಮೇ 3ರಿಂದ ಮೂರು ದಿನಗಳ ಕಾಲ ನಡೆಯಲಿದೆ


ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಕಾರ್ಯಕ್ರಮ ಉದ್ಘಾಟಿಸುವರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ಪಾಲ್ಗೊಳ್ಳುವರು.

ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿ ಡಾ.ಬಿ.ಜಗದೀಶ್ ತಿಳಿಸಿದರು.


ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಿದ್ದು, ಪ್ರಮುಖವಾಗಿ ಶ್ವಾನ ಪ್ರದರ್ಶನ, ಆಟೋ ಎಕ್ಸ್‌ಪೋ, ರಂಗೋಲಿ, ಫೀಟ್ ಆನ್ ಫೈರ್, ವಾಯ್ಸ ಆಫ್ ವಿವಿಸಿಇ, ಮೆಹೆಂದಿ, ಬೆಂಕಿಯಿಲ್ಲದ ಅಡುಗೆ ಮಾಡುವುದು, ಬಾಕ್ಸ್ ಕ್ರಿಕೆಟ್ ಚಾಂಪಿಯನ್‌ಶಿಪ್, ಫ್ಯಾಷನ್ ಫ್ರಾಂಟಿಯರ್, ಟಗ್ ಆಫ್ ವಾರ್, ಪಿಎಸ್ 4 ಕ್ಲಾಷ್, ಬ್ಯಾಡ್ಮಿಂಟನ್, ಫೋಟೋಗ್ರಫಿ, ರೀಲ್ಸ್ ಸ್ಪರ್ಧೆಗಳು ಸೇರಿವೆ ಎಂದು ಮಾಹಿತಿ ನೀಡಿದರು.


ಮೊದಲ ದಿನದ ಸಂಜೆ ಸ್ಯಾಂಡಲ್‌ವುಡ್ ನೈಟ್ ಮತ್ತು ಲಗೋರಿ ಬ್ಯಾಂಡ್ ಪ್ರೇಕ್ಷಕರನ್ನು ರಂಜಿಸಲಿದೆ. 2ನೇ ದಿನ ಬಾಲಿವುಡ್ ನೈಟ್ ಮತ್ತು ರಾಘವ್ ಚೈತನ್ಯ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. 3ನೇ ದಿನದಂದು ಡಿಜೆ ರಾತ್ರಿ ಮತ್ತು ಅಂತಾರಾಷ್ಟ್ರೀಯ ಡಿಜೆ ಕ್ಯಾಂಡಿಸ್ ರೆಡ್ಡಿಂಗ್ ತಂಡ ಯುವ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ತಿಳಿಸಿದರು.


ಸಹಾಯಕ ಪ್ರಾಧ್ಯಾಪಕರಾದ ಪುನೀತ್, ಆಡ್ರಿ ಆರ್ಲೀನ್, ವಿದ್ಯಾರ್ಥಿಗಳಾದ ಪ್ರಜ್ವಲ್ ಕಲಾಲ್, ಧರಣೇಶ್, ಹರ್ಷಿತ್, ಇಂಪನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net