ಹೆಮ್ಮಾಡಿಯಲ್ಲಿ ವಿದ್ಯಾಪೋಷಕ್​ ಮನೆ ಹಸ್ತಾಂತರ

udp-30-vidyaposhak
Published on

ಉಡುಪಿ: ಯಕ್ಷಗಾನ ಕಲಾರಂಗದ ಸಮಾಜಪರ ಕೆಲಸ ವಿಶಿಷ್ಟವಾಗಿದ್ದು, ವಿದ್ಯಾಪೋಷಕ್​ ಮನೆ ನಿಮಾರ್ಣಕ್ಕೆ ಆಯ್ಕೆ ಮಾಡುವ ವಿಧಾನವೇ ಅತ್ಯಂತ ವೈಜ್ಞಾನಿಕವಾಗಿದೆ. ಕನಿಷ್ಠ ವೆಚ್ಚದಲ್ಲಿ ದಾನಿಗಳು ನೀಡುವ ಹಣ ಪೋಲಾಗದಂತೆ ವಾಸಯೋಗ್ಯ ಮನೆ ಕಟ್ಟಿಕೊಡುವ ಯೋಜನೆ ಶ್ಲಾನೀಯ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಗುರುವಾರ ಹೆಮ್ಮಾಡಿಯ ಕಟ್ಟುವಿನಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ದ್ವೀತಿಯ ಪಿ.ಯು.ಸಿ. ವಿದ್ಯಾರ್ಥಿನಿ ಸಿಂಚನಾಳಿಗೆ ದಾನಿಗಳ ನೆರವಿನಿಂದ ನಿರ್ಮಿಸಿದ ನೂತನ ಮನೆ ಸರಸ್ವತಿ ನಿಲಯ ಉದ್ಘಾಟಿಸಿ ಮಾತನಾಡಿದರು.

ಕೃಷ್ಣಪ್ರಸಾದ್​ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಿ. ಎಸ್​. ಸುರೇಶ್​ ಶೆಟ್ಟಿ, ವೆಂಕಟೇಶ್​ ಕಿಣಿ ಅಭ್ಯಾಗತರಾಗಿದ್ದರು. ಸಂಸ್ಥೆಯ ದಾನಿಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್​. ರಾಜಗೋಪಾಲ ಆಚಾರ್ಯ, ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಸಾಮಾಜಿಕ ಕಾರ್ಯಕರ್ತ ರಾಜೇಶ್​, ಗೋಪಾಲ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್​. ವಿ. ಭಟ್​, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್​ , ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಜಿ. ಪುತ್ರನ್​, ಹೆಮ್ಮಾಡಿ ಶಾಲಾ ಮುಖ್ಯೋಪಾಧ್ಯಾಯ ಮಂಜು ಕಾಳಾವಾರ್​, ಪತ್ರಕರ್ತ ಶ್ರೀಪತಿ ಹೆಗಡೆ, ನರಸಿಂಹಮೂರ್ತಿ, ಸಂಸ್ಥೆಯ ಸದಸ್ಯರಾದ ಬಿ. ಭುವನಪ್ರಸಾದ್​ ಹೆಗ್ಡೆ, ಅನಂತರಾಜ್​ ಉಪಾಧ್ಯ, ಸಂತೋಷ ಕುಮಾರ ಶೆಟ್ಟಿ, ಎ. ಅಜಿತ್​ ಕುಮಾರ್​, ಸುದರ್ಶನ ಬಾಯರಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್​. ಎನ್​. ಶೃಂಗೇಶ್ವರ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net