ವಿದ್ಯೋದಯ ಶಾಲಾ ಪ್ರಾರಂಭೋತ್ಸವ

udp-3-vidyodaya
Published on

ಉಡುಪಿ: ಪಿ.ಯು.ಸಿ ಶಿಕ್ಷಣ ಅತೀ ಮಹತ್ವದ್ದಾಗಿದೆ. ಕೇವಲ ಬಾಹ್ಯ ತೋರಿಕೆಯ ವಿಚಾರಗಳಿಗೆ ಮಹತ್ವ ಕೊಡದೆ ಆಂತರಿಕ ಸೌಂದರ್ಯವನ್ನು ಗಟ್ಟಿಗೊಳಿಸುವಲ್ಲಿ ಶ್ರಮವಹಿಸಬೇಕು ಎಂದು ಕಾರ್ಕಳ ಎಂ.ವಿ. ಶಾಸ್ತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಭಟ್​ ಹೇಳಿದರು.

ಸೋಮವಾರ ವಿದ್ಯೋದಯ ಟ್ರಸ್ಟ್​ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎನ್​. ನಾಗರಾಜ ಬಲ್ಲಾಳ್​ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಯು. ಪದ್ಮರಾಜ್​ ಆಚಾರ್ಯ ಉಪಸ್ಥಿತರಿದ್ದರು. ಪ್ರಾಂಶುಪಾಲ ಸಂದೀಪ್​ ಕುಮಾರ್​ ಅವಲೋಕನಗೈದರು. ಉಪಪ್ರಾಂಶುಪಾಲ ರಂಜನಾ ಕೆ. ಸ್ವಾಗತಿಸಿದರು. ಉಪನ್ಯಾಸಕ ಶಕುಂತಲಾ ಆರ್​. ಪಾಲನ್​, ಸಂದೀಪ್​ ಶೆಣೈ, ಉಷಾ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಉಪನ್ಯಾಸಕಿ ಸಪ್ನಾ ರಾಜೇಶ್​ ಅತಿಥಿಗಳನ್ನು ಪರಿಚಯಿಸಿದರು. ಸೌಮ್ಯಾ ಕಜೆಕಾರ್​ ವಂದಿಸಿ, ಶಿವಪ್ರಸಾದ ಭಟ್​ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net