ವಿದ್ಯಾವರ್ಧಕ ಇಂಜಿನಿಯರಿಂಗ್ ತಂಡ ಪ್ರಥಮ

38
Published on

ಮೈಸೂರು: ಕಲ್ಯಾಣಮ್ಮ ಮತ್ತು ಬಸವರಾಜು ಸ್ಮರಣಾರ್ಥ 2022- 23ನೇ ಸಾಲಿನ ನಗರ ಅಂತರ ಕಾಲೇಜು ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಹಾಗೂ ಪುರುಷರ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆಯಿತು.

ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ಮತ್ತು ಟೆರೇಷಿಯನ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಪಂದ್ಯವಾಳಿಯಲ್ಲಿ ಸಾಧನೆ ಮಾಡಿದೆ.

ಅಂತೆಯೇ ಪುರುಷರ ವಿಭಾಗದಲ್ಲಿ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ತಂಡ ದ್ವಿತೀಯ ಹಾಗೂ ಎಸ್‌ಜೆಸಿಇ ತಂಡ ತೃತೀಯ ಬಹುಮಾನ ಪಡೆದವು. ಮಹಿಳೆಯರ ವಿಭಾಗದಲ್ಲಿ ಪಿಜಿಎಸ್‌ಇ ಮಾನಸ ಗಂಗೋತ್ರಿ ತಂಡ ದ್ವಿತೀಯ ಹಾಗೂ ಸೇಪಿಯೇಂಟ್ ಕಾಲೇಜು ತಂಡ ತೃತೀಯ ಬಹುಮಾನ ಪಡೆಯಿತು.

ಗೆಲುವು ಪಡೆದ ತಂಡಗಳಿಗೆ ಮೈಸೂರು ವಿವಿ ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಎಸ್.ಜೆ.ಮಂಜುನಾಥ್ ಪ್ರಶಸ್ತಿ ವಿತರಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಬಸವಲಿಂಗು, ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಇತರರಿದ್ದರು. ಪಂದ್ಯಾವಳಿಯಲ್ಲಿ 29 ಮಹಿಳಾ ಹಾಗೂ 27 ಪುರುಷ ತಂಡಗಳು ಪಾಲ್ಗೊಂಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net