ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದ ಯುವಕನನ್ನು ಹಿಡಿದುಕೊಟ್ಟ ವಿದ್ಯಾಥಿರ್ನಿಯರು

Crime Logo
Published on

ರಾಣೆಬೆನ್ನೂರ: ಯುವತಿಯರ ವಸತಿ ನಿಲಯದ ಎದುರು ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದ ಯುವಕನೊಬ್ಬನ್ನು ವಿದ್ಯಾಥಿರ್ನಿಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಟನೆ ಇಲ್ಲಿಯ ಕಮಲಾ ನಗರದ ಬಿಸಿಎಂ ಮೆಟ್ರೀಕ್​ ನಂತರದ ವಿದ್ಯಾಥಿರ್ನಿಯರ ವಸತಿ ನಿಲಯದ ಬಳಿ ಸೋಮವಾರ ನಡೆದಿದೆ.
ಯುವಕನೊಬ್ಬ ಕಳೆದ ಒಂದು ತಿಂಗಳಿಂದ ವಸತಿ ನಿಲಯದ ಹಿಂಭಾಗದಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡುವುದು, ಬಟ್ಟೆ ಕಳಚಿ ನಿಲ್ಲುವುದು ಮಾಡುತ್ತಿದ್ದ. ಇದನ್ನು ಗಮನಿಸಿದ ವಿದ್ಯಾಥಿರ್ನಿಯರು ಆತ ಬಂದ ಕೂಡಲೇ ಸ್ವತಃ ಅವರೇ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಹಿಡಿದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆದರೆ, ಆತ ಯಾರು, ಎಲ್ಲಿಂದ ಬಂದಿದ್ದಾನೆ ಎಂಬುದನ್ನು ಬಾಯಿಬಿಟ್ಟಿಲ್ಲ ಎನ್ನಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net