ದಿನಪತ್ರಿಕೆ ಓದಿನಿಂದ ವೃದ್ಧಿಸಲಿದೆ ಜ್ಞಾನ

vidyarti mitra
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬೆಳವಂಗಲ
ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳುವ ಜತೆಗೆ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ವ್ಯಕ್ತಿಗಳಾಗಬೇಕು ಎಂದು ಜ್ಞಾನವಾಹಿನಿ ಆಂಗ್ಲಪ್ರೌಢಶಾಲಾ ಮುಖ್ಯಶಿಕ್ಷಕಿ ಜ್ಯೋತಿ ಕುಮಾರಿ ಹೇಳಿದರು.
ದೊಡ್ಡಬೆಳವಂಗಲದ ಜ್ಞಾನವಾಹಿನಿ ಆಂಗ್ಲ ಪ್ರೌಢಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ವಿತರಿಸಿ ಮಾತನಾಡಿದರು.
ಶಿಕ್ಷಕ ವಿನಯ್ ಗೌಡ ಮಾತನಾಡಿ, ವಿಜಯವಾಣಿಯ ವಿದ್ಯಾರ್ಥಿ ಮಿತ್ರ ಸಂಚಿಕೆ ಜ್ಞಾನ ಭಂಡಾರವಾಗಿದ್ದು, ವರ್ಷಪೂರ್ತಿ ದಾಖಲೆ ಮಾಡಿಟ್ಟುಕೊಂಡರೆ, ವಿದ್ಯಾರ್ಥಿ ಜೀವನಕ್ಕೆ ಉಪಯೋಗವಾಗುತ್ತದೆ. ವಿಜ್ಞಾನ, ಗಣಿತ ಮತ್ತು ಆಂಗ್ಲಭಾಷೆ ವಿಷಯಗಳ ಸಮಗ್ರ ನೋಟ ಮಿತ್ರದಲ್ಲಿದ್ದು, ಸಮರ್ಪಕವಾಗಿ ಅಧ್ಯಯನ ಮಾಡಿದರೆ, ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಬಹುದು ಎಂದರು.
ಶಿಕ್ಷಕಿ ವಿಜಯಲಕ್ಷ್ಮೀ ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಬಾರದು. ಓದಿನ ವಿಚಾರದಲ್ಲಿ ಸದಾ ಅಧ್ಯಯನ ಶೀಲರಾಗಿರಬೇಕು. ಪಠ್ಯದ ಜತೆಗೆ ವಿದ್ಯಾರ್ಥಿ ಮಿತ್ರದ ಅನುಕೂಲ ಪಡೆದುಕೊಳ್ಳಬೇಕು. ಸಂಚಿಕೆಯಲ್ಲಿ ಬರುವ ಪ್ರಶ್ನೆ ಪತ್ರಿಕೆಗಳು ದಿನಂಪ್ರತಿ ಪಟ್ಟಿ ಮಾಡಿಟ್ಟುಕೊಳ್ಳಬೇಕು ಎಂದರು.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮುದ್ರಣ ಮಾಧ್ಯಮದ ಪಾತ್ರ ಮಹತ್ತರವಾಗಿದ್ದು, ವಿಜಯವಾಣಿ ಪತ್ರಿಕೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಪತ್ರಿಕೆ ಓದುವುದರಿಂದ ಜ್ಞಾನ ಹೆಚ್ಚುವುದಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗಲಿದೆ. ಅದಲ್ಲದೆ ಹತ್ತನೇ ತರಗತಿಯ ವಿದ್ಯಾರ್ಥಿಗಳು ಪ್ರಾರಂಭದ ಹಂತವಾಗಿರುವುದರಿಂದ ತುಂಬಾ ಗಮನವಿಟ್ಟು ಓದಬೇಕು. ದೇಶ ಹಾಗೂ ರಾಜ್ಯದಲ್ಲಿ ಸಾಧನೆ ಮಾಡಿದವರು, ಕನ್ನಡ ಮಾಧ್ಯಮದಲ್ಲಿ ಓದಿದವರೇ ಎಂದು ಶಿಕ್ಷಕ ಶ್ವೇತಾ ತಿಳಿಸಿದರು.
10ನೇ ತರಗತಿ ವಿದ್ಯಾರ್ಥಿನಿ ಗೀತಾ ಮಾತನಾಡಿ, ವಿದ್ಯಾರ್ಥಿ ಮಿತ್ರದಿಂದ ಓದುವ ಕೌಶಲ ಹಚ್ಚಿದ್ದು, ಪ್ರತಿದಿನ ಒದಲೇಬೇಕೆನಿಸುವ ಹಾಗೂ ಪಠ್ಯದ ವಿಚಾರದಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಹೀಗಿರುತ್ತದೆ ಎಂಬ ಅರಿವು ಬಂದಿದೆ. ಪತ್ರಿಕೆಯಲ್ಲಿ ಸಾಧಕರ ವಿಚಾರವನ್ನು ಓದುತ್ತಿರಬೇಕಾದರೆ ನಾವು ಒಂದಲ್ಲ ಒಂದು ದಿನ ಸಾಧಕರಾಗಬೇಕು ಎನಿಸುತ್ತದೆ ಎಂದರು.
ಶಿಕ್ಷಕಿ ವಿನಯ್ ಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net