

ವಿಜಯವಾಣಿ ಸುದ್ದಿಜಾಲ ಮಧುರೆ
ಸ್ವರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ವಿಜಯವಾಣಿಯ ವಿದ್ಯಾರ್ಥಿಮಿತ್ರ ಸಂಚಿಕೆ ಬಹಳ ಅನುಕೂಲವಾಗಿದೆ ಎಂದು ಜ್ಞಾನವಾಹಿನಿ ಶಾಲೆ ವಿದ್ಯಾರ್ಥಿನಿ ಜನೀಲಾ ಹೇಳಿದರು.
ದೊಡ್ಡಬೆಳವಂಗಲ ಹೋಬಳಿಯ ಜ್ಞಾನವಾಹಿನಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ವಿಜಯವಾಣಿಯ ವಿದ್ಯಾರ್ಥಿ ಉದ್ಯೋಗಮಿತ್ರ ಸಂಚಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಮುಖವಾಗಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆಗೆ ತಯಾರಿ ನಡೆಸಲು ಬೇಕಾದ ಎಲ್ಲ ಮಾಹಿತಿ ಮಾರ್ಗದರ್ಶನ ಈ ಸಂಚಿಕೆ ಮೂಲಕ ಸರಳವಾದ ಭಾಷೆಯಲ್ಲಿ ದೊರಕಲಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮ್ಮ ಎಂದಿನ ಪಠ್ಯಪುಸ್ತಕಗಳೊಂದಿಗೆ ಈ ವಿದ್ಯಾರ್ಥಿಮಿತ್ರ ಸಂಚಿಕೆ ನೆರವು ಪಡೆದು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಲಿತಾಂಶ ಪಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗಣಿತ, ವಿಜ್ಞಾನ ವಿಷಯಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈ ಸಂಚಿಕೆ ಸಹಕಾರಿಯಾಗಿದೆ ಎಂದು ಶಾಲೆಯ ಮತ್ತೊರ್ವ ವಿದ್ಯಾರ್ಥಿನಿ ಗುಣಶ್ರೀ ಹೇಳಿದರು. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯ ವ್ಯಾಕರಣದ ಬಗ್ಗೆ ಹೆಚ್ಚು ಅರಿತುಕೊಳ್ಳಲು ಸಂಚಿಕೆಯಲ್ಲಿನ ಸರಳ ವಾಕ್ಯಗಳು ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಕಾರಿಯಾಗಲಿದೆ ಎಂದರು. ಸಂಚಿಕೆಯೊಂದಿಗೆ ಪ್ರತಿದಿನ ದಿನಪತ್ರಿಕೆಗಳನ್ನು ಓದುವುದರಿಂದ ವಿದ್ಯಾರ್ಥಿಗಳಲ್ಲಿ ಸಾಮಾನ್ಯಜ್ಞಾನವೂ ವೃದ್ಧಿಸುತ್ತದೆ ಆದ್ದರಿಂದ ಎಲ್ಲರೂ ಕನ್ನಡ ದಿನಪತ್ರಿಕೆ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದರು/