ಅಂಕ ಗಳಿಕೆಗೆ ‘ವಿದ್ಯಾರ್ಥಿಮಿತ್ರ’ ಸಹಕಾರಿ

06 SRT 1
Published on

ಶಿರಹಟ್ಟಿ: ಕರ್ನಾಟಕದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಪ್ರಕಟಿಸುವ ವಿದ್ಯಾರ್ಥಿ ಮಿತ್ರ ಸಂಚಿಕೆ ವಿದ್ಯಾರ್ಥಿಗಳ ಪಾಲಿಗೆ ಮಾಹಿತಿ ಕಣಜವಾಗಿದ್ದು, ಅದರಲ್ಲಿನ ವಿಷಯಗಳ ಅಧ್ಯಯನ ಹೆಚ್ಚು ಅಂಕ ಗಳಿಕೆಗೆ ಸಹಕಾರಿಯಾಗುತ್ತದೆ ಎಂದು ಶಿವಯೋಗೀಶ್ವರ ಶಿಕ್ಷಣ ಸಮಿತಿ ಚೇರ್ಮನ್ ಸಿ.ಟಿ. ಮುಂಡವಾಡ ಹೇಳಿದರು.
ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಶ್ರೀ ಶಿವಯೋಗೀಶ್ವರ ಪೌಢಶಾಲೆಯ ಶಿಕ್ಷಣ ಸಮಿತಿಯ ಶಾಲೆಯ ಮಕ್ಕಳಿಗೆ ‘ವಿದ್ಯಾರ್ಥಿ ಮಿತ್ರ’ ವಿತರಿಸಿ ಅವರು ಮಾತನಾಡಿದರು. ಪ್ರೊ. ಎಸ್.ಬಿ. ಮಲ್ಲೂರ ಮಾತನಾಡಿ, ವಿಜಯವಾಣಿಯ ವಿದ್ಯಾರ್ಥಿಮಿತ್ರ ಜ್ಞಾನ ಭಂಡಾರವಾಗಿದೆ. ಇದು ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ಐಎಎಸ್, ಕೆಎಎಸ್, ಪೊಲೀಸ್ ಇಲಾಖೆ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಕಾರಿಯಾಗುವಂತೆ ವಿಷಯ ತಜ್ಞರಿಂದ ಮಾಹಿತಿ ಸಂಗ್ರಹಿಸಿ ಓದುಗರ ಕೈಗೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪತ್ರಿಕೆಯಲ್ಲಿನ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯಗಳನ್ನು ಓದಿದರೆ ಕಠಿಣ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು. ಪ್ರಸಾರಾಂಗ ಪ್ರತಿನಿಧಿ ಮಂಜುನಾಥ ಪಾಟೀಲ ವಿದ್ಯಾರ್ಥಿ ಮಿತ್ರ ಪತ್ರಿಕೆಯ ಪ್ರಯೋಜನ ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯ ಎಫ್.ಐ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಮಿತಿ ಸದಸ್ಯ ಶಿವಣ್ಣ ಹಾವೇರಿ, ಎಸ್.ಪಿ. ಕಂಠಿಗೌಡ್ರ, ಸಿ.ಆರ್. ಪಾಟೀಲ, ಆರ್.ಎಚ್. ಪಾಟೀಲ, ಎಚ್.ಎಚ್. ಹುರಕಣ್ಣವರ, ರಾಮಣ್ಣ ನೆಗಳೂರ, ವಿ.ಎನ್. ಪಾಟೀಲ ಇದ್ದರು. ಕೆ.ಜಿ. ಇನಾಮದಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net