

ರೋಣ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿರುವ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವನ್ನು ಪ್ರತಿಯೊಬ್ಬರೂ ಓದಿ ಸಾಧನೆ ಮಾಡಬೇಕು ಎಂದು ಮುಖ್ಯೋಪಾಧ್ಯಾಯ ಪಿ.ಎಫ್. ಗೌಡರ್ ಹೇಳಿದರು.
ಸೂಡಿಯ ಶ್ರೀಗುರುಮಹಾಂತೇಶ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ವಿತರಿಸಿ ಅವರು ಮಾತನಾಡಿದರು.
ಎಂ.ಎ. ಅರಳಿಗಿಡ ಮಾತನಾಡಿ, ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಯು ಹಲವಾರು ಮಾಹಿತಿಯನ್ನು ಒಳಗೊಂಡಿದೆ. ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪತ್ರಿಕೆ ಸಹಕಾರಿಯಾಗಿದೆ ಎಂದರು.
ಶಿಕ್ಷಕರಾದ ಎಸ್.ಕೆ. ಕಾಜಗಾರ, ಆರ್.ಡಿ. ಕುಟುಕನಕೇರಿ, ಬಿ.ಎಸ್. ಬಸನಗೌಡರ, ಎನ್.ಟಿ. ಮೇಲ್ಮನಿ, ಆರ್.ಎಚ್. ಕಟ್ಟಿಮನಿ, ಎಸ್.ಬಿ. ಕುಲಕರ್ಣಿ, ಆರ್.ಎನ್. ಜೋಶಿ ಇದ್ದರು.