ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಿ

IMG_20241231_110306_330.jpg
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ತರಳಬಾಳು ಕ್ಯಾಂಪಸ್ ನಲ್ಲಿರುವ ಆರ್.ಕೆ. ಕೋಕಾಟಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಂಗಳವಾರ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ಹಂಚಿಕೆ ಮಾಡಲಾಯಿತು.

ವಿದ್ಯಾರ್ಥಿಗಳು ಸಂಚಿಕೆ ಪಡೆದು ಅದರಲ್ಲಿನ ಮಾಹಿತಿ ಓದುವ ಮೂಲಕ ಸಂತಸ ಹಂಚಿಕೊಂಡರು. ಎಸ್ಎಸ್ಎಲ್ಸಿ ಅಂತಿಮ ಪರೀಕ್ಷೆಗೆ ಸಂಬಂಧಿಸಿದ ಹಲವು ಮಾಹಿತಿಗಳು ಇದರಲ್ಲಿ ಇವೆ. ಶಾಲೆಯಲ್ಲಿ ಕಲಿತಿರುವುದು ಹಾಗೂ ಪತ್ರಿಕೆಯಲ್ಲಿನ ಮಾಹಿತಿ ಎರಡೂ ಸೇರಿದರೆ ಹೆಚ್ಚು ಅಂಕ ಪಡೆಯಲು ಅನುಕೂಲವಾಗಲಿದೆ ಎಂದು ಖುಷಿ ಹಂಚಿಕೊಂಡರು.

ಐ.ಜಿ. ಹಿರೇಗೌಡರ ಪಿಯು ಕಾಲೇಜಿನ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಎಸ್.ಎ್. ಹೆಬಸೂರ ಮಾತನಾಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಇದನ್ನು ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಮಿತಿ ಸದಸ್ಯ ಮೋಹನ ಬಡ್ನಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟರೆ ಬಹಳಷ್ಟು ಸಾಧನೆ ಮಾಡಬಹುದು ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕ ಬಿ.ಜಿ. ಶಿವಕುಮಾರ ಗೌಡ, ಶಿಕ್ಷಕರಾದ ವಿಜಯಶ್ರೀ ಕೆರೂರ, ಭಾರತಿ ಜಿ. ವೀರನಗೌಡ್ರು, ಎಂ.ಎಂ. ಕುಸುಗಲ್, ಹನುಮಂತಪ್ಪ ಉಪ್ಪಾರ, ಮಂಜುನಾಥ ಅವರಸಂಗ, ಜಯಪ್ರಕಾಶ ಬಂಡಿವಡ್ಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net