

ವಿಜಯವಾಣಿ ಸುದ್ದಿಜಾಲ ಉಡುಪಿ
ಅನ್ನಬ್ರಹ್ಮನ ನಾಡಾದ ಉಡುಪಿ ಪರಿಸರದಲ್ಲಿ ಸುಬ್ರಹ್ಮಣ್ಯ ಮಠ ನಿರ್ಮಿಸುತ್ತಿರುವ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದಲ್ಲಿ ನರಸಿಂಹದೇವರ ವ್ಯಾಸಮುಷ್ಟಿ ಪೂಜೆ ನಡೆಸಬೇಕು ಎಂದು ಪುತ್ತಿಗೆ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಆಹ್ವಾನ ನೀಡಿದರು.
ಉಡುಪಿ ಶ್ರೀಕೃಷ್ಣ ಮಠಕ್ಕೆ ಬುಧವಾರ ಭೇಟಿ ನೀಡಿದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರನ್ನು ಭಕ್ತರು ಮತ್ತು ವಿದ್ವಾಂಸರ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಮಾತನಾಡಿದರು.
ವೇದವ್ಯಾಸರ ಪ್ರತಿಷ್ಠಾಪನೆಯ ದಿನದಂದು ವ್ಯಾಸಮುಷ್ಟಿಯ ಆರಾಧಕರಾದ ಸುಬ್ರಹ್ಮಣ್ಯದ ಶ್ರೀಪಾದರುಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನಕ್ಕೆ ಆಗಮಿಸಿರುವುದು ನಮಗೆ ಸಂತಸ ತಂದಿದೆ ಎಂದರು.
ಪುತ್ತಿಗೆ ಕಿರಿಯ ಪಟ್ಟದ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.