ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ

udp-11-vidyaposhak
Published on

ಉಡುಪಿ: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ರಂಗನಕೆರೆಯ ಜಯಂತಿ ಕೃಷ್ಣ ಬಂಗೇರ ಸುಪುತ್ರಿ ನಿಶ್ಮಿತಾಳಿಗೆ ನಿರ್ಮಿಸಿಕೊಟ್ಟ ನೂತನ ಮನೆ ‘ಸಾವಿತ್ರಿ ರಾಮಚಂದ್ರ ಸದನ’ ವನ್ನು ಮನೆಯ ಪ್ರಾಯೋಜಕ ಡಾ. ಎಂ.ಆರ್ ಹೆಗಡೆ ಮತ್ತು ಕಮಲಾ ಹೆಗಡೆ ಉದ್ಘಾಟಿಸಿದರು.

ಡಾ. ಎಂ.ಆರ್ ಹೆಗಡೆ ಮಾತನಾಡಿ, ಸಮಾಜದ ಋಣವನ್ನು ನನ್ನ ಮಿತಿಯಲ್ಲಿ ತೀರಿಸುವ ಅವಕಾಶವನ್ನು ಕಲಾರಂಗ ನೀಡಿದೆ. ಕೇವಲ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾದ ಮನೆ ನಿರ್ಮಾಣಮಾಡಿರುವುದು ಕಲಾರಂಗದ ಪ್ರಾಮಾಣಿಕತೆಗೆ ದ್ಯೋತಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ , ಎಂ. ಆರ್. ಹೆಗಡೆಯವರ ಪುತ್ರಿ ಡಾ. ಸ್ಮಿತಾ ಹಾಗೂ ಅಳಿಯ ಡಾ. ಪ್ರಶಾಂತ್ ಭಟ್ ಉಪಸ್ಥಿತರಿದ್ದರು. ಅಭ್ಯಾಗತರಾಗಿ ಶ್ರೀನಿವಾಸ ಶೆಟ್ಟಿಗಾರ್, ಗೋಪಿನಾಥ ಕಾಮತ್, ಯು. ವಿಶ್ವನಾಥ್ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ರಾಮಚಂದ್ರ ಅಡಿಗ, ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ಬಿ. ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಡಾ. ರಾಜೇಶ್ ನಾವುಡ, ಗಣೇಶ್ ಬ್ರಹ್ಮಾವರ, ನಾಗರಾಜ ಹೆಗಡೆ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಹೆಚ್. ಎನ್. ಶೃಂಗೇಶ್ವರ ಸಹಕರಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net