

ಉಡುಪಿ: ಯಕ್ಷಗಾನ ಕಲಾರಂಗದ ಅಂಗಸಂಸ್ಥೆಯ ವಿದ್ಯಾಪೋಷಕ್ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ಬೈಕಾಡಿಯ ಸುಲೋಚನಾ ಮತ್ತು ಕೃಷ್ಣಮೂರ್ತಿ ಆಚಾರ್ಯರ ಪುತ್ರಿ ನವ್ಯಾ ಅವರಿಗೆ ನಿರ್ಮಿಸಿದ 'ಪುಷ್ಪಾನಂದ' ನೂತನ ಮನೆಯನ್ನು ಉಡುಪಿ ಶಾಸಕ, ಮನೆಯ ಪ್ರಾಯೋಜಕ ಯಶ್ಪಾಲ್ ಎ. ಸುವರ್ಣ ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು, ಯಕ್ಷಗಾನ ಕಲಾರಂಗವು ವಿಶ್ವಾಸಾರ್ಹತೆಗೆ ಇನ್ನೊಂದು ಹೆಸರಾಗಿದೆ. ಕಲೆ, ಕಲಾವಿರು, ವಿದ್ಯಾರ್ಥಿಗಳಿಗಾಗಿ ಮಾಡುವ ನಿಸ್ಪಹ ಸೇವೆಯನ್ನು ಹತ್ತಿರದಿಂದ ಗಮನಿಸಿದ್ದೇನೆ. ಮಾತಾಪಿತರಾದ ಪುಷ್ಪಾವತಿ ಸುವರ್ಣ ಮತ್ತು ಆನಂದ ಎನ್. ಪುತ್ರನ್ ನೆನಪಿನಲ್ಲಿ ಮನೆ ನಿರ್ಮಿಸುವ ಅವಕಾಶವನ್ನು ನೀಡಿದ್ದಕ್ಕೆ ಸಂಸ್ಥೆಗೆ ಋಣಿಯಾಗಿದ್ದೇನೆ ಎಂದರು.
ಸಹೋದರ ಯಶವಂತ ಸುವರ್ಣ, ಸಹೋದರಿಯರಾದ ಯಶ್ವಿನಿ, ಯಶ್ವಿಲ್, ಭಾವ ಪ್ರಸೂನ್, ತಾಲೂಕು ಪಂಚಾಯಿತಿ ಸದಸ್ಯೆ ವಸಂತಿ, ಸಾಮಾಜಿಕ ಕಾರ್ಯಕರ್ತ ರ್ಬಿತಿ ರಾಜೇಶ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಬೈಕಾಡಿ ರಮೇಶ್ ಅಡಿಗ ಪಾಲ್ಗೊಂಡಿದ್ದರು.
ಸಂಸ್ಥೆಯ ದಾನಿಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ಅನಂತರಾಜ ಉಪಾಧ್ಯ, ವಿದ್ಯಾಪ್ರಸಾದ್, ವಿಜಯ ಕುಮಾರ್ ಮುದ್ರಾಡಿ, ಕೆ. ಅಜಿತ್ ಕುಮಾರ್, ದಿನೇಶ್ ಪಿ. ಪೂಜಾರಿ, ಗಣೇಶ್ ಬ್ರಹ್ಮಾವರ, ನಾಗರಾಜ ಹೆಗಡೆ ಹಾಗೂ ಮಹೇಶ್ ಕುಲಕರ್ಣಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಶೃಂಗೇಶ್ವರ ಸಹಕರಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.