ತಾಯಿಯ ಶ್ರಮಕ್ಕೆ "ಮಾನ್ಯ"ತೆ

udp-8-manya
Published on

ಉಡುಪಿ: ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಗೇರು ಬೀಜ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವ ತಾಯಿಯ ಶ್ರಮಕ್ಕೆ ಬೆಲೆ ನೀಡಿರುವ ಮಂದಾರ್ತಿ ಶ್ರೀ ದುರ್ಗ ಪರಮೇಶ್ವರಿ ಟೆಂಪಲ್​ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಮಾನ್ಯ ಎಸ್​. ಪೂಜಾರಿ ದ್ವೀತಿಯ ಪಿಯುಸಿ ಪರೀೆಯಲ್ಲಿ 571 (ಶೇ.95.1) ಅಂಕ ಗಳಿಸಿದ್ದಾರೆ.

ಕುಂದಾಪುರ ಸಣ್ಣ ಹಳ್ಳಿ ಹೆಸಕುತ್ತೂರಿಂದ 25 ಕಿಮೀ ದೂರದ ಶಾಲೆಗೆ 2 ಬಸ್​ ಬದಲಾಯಿಸಿಕೊಂಡ ನಿತ್ಯ ಪ್ರಯಾಣ. ತಾಯಿ ವಿನೋದಾ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ. ಸದ್ಯ ಮಾನ್ಯ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ವಿದ್ಯಾರ್ಥಿನಿಯಾಗಿದ್ದು, ಮುಂದಿನ ದಿನಗಳಲ್ಲಿ ಬಿಕಾಂ ಪದವಿ ಜೊತೆಗೆ ಸಿಎ ಪರೀೆ ಬರೆಯುವ ಆಸೆಯಿದೆ. ಯಾವುದೇ ಟ್ಯೂಷನ್​ಗೆ ಹೋಗದೇ ಕಾಲೇಜು ಪ್ರಾಧ್ಯಾಪಕರ ಸಹಾಯ ಪಡೆದು, ಶ್ರಮವಹಿಸಿ ಓದಿದ್ದೇನೆ. ಉತ್ತಮ ಅಂಕ ಲಭಿಸಿದೆ. -ಮಾನ್ಯ ಪೂಜಾರಿ, ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net