ಬಡವರಿಗೆ ನೆರವಿನಿಂದ ರಾಮರಾಜ್ಯ ಕನಸು ನನಸು: ಪೇಜಾವರ ಶ್ರೀ

udp-27-vidyaposhak
Published on

ಉಡುಪಿ: ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಿದರೆ ರಾಮರಾಜ್ಯದ ಕನಸು ನನಸಾಗುತ್ತದೆ. ಸಾಕಷ್ಟು ಜನ ಧನಿಕರಿದ್ದಾರೆ. ಅವರ ಸಂಪತ್ತು ಬಡವರಿಗೆ ತಲುಪಬೇಕಾದರೆ ಯಕ್ಷಗಾನ ಕಲಾರಂಗದಂತಹ ವಿಶ್ವಾಸಾರ್ಹ ಸಂಘಟನೆ ಅಗತ್ಯವಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.


ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿ ಜಂಬೂರಿನ ನಾಗರಾಜ ಅವರಿಗೆ  ಪೇಜಾವರ ಮಠದ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಮನೆಯನ್ನು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.

ಮನೆಯ ಸಹಪ್ರಾಯೋಜಕ ಗುರುರಾಜ್ ಅಮೀನ್ ಮತ್ತು ಜಯಲಕ್ಷ್ಮೀ ಜಿ. ಅಮೀನ್ ಅವರಿಗೆ ಸ್ವಾಮೀಜಿಯವರು ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. ಅಭ್ಯಾಗತರಾಗಿ ಕೆ. ಸದಾಶಿವ ಭಟ್, ಯು. ರಾಜಗೋಪಾಲ ಅಚಾರ್ಯ, ಬಿಲ್ಲಾಡಿ ಸೀತಾರಾಮ್ ಶೆಟ್ಟಿ, ಸಜಿತ್ ಹೆಗ್ಡೆ ಭಾಗವಹಿಸಿದ್ದರು. ಸಂಸ್ಥೆಯ ಸದಸ್ಯರಾದ ಭುವನಪ್ರಸಾದ್ ಹೆಗ್ಡೆ, ವಿದ್ಯಾಪ್ರಸಾದ್, ಕಿಶೋರ್ ಸಿ. ಉದ್ಯಾವರ, ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ರಾಜೀವಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಎಚ್. ಎನ್. ಶೃಂಗೇಶ್ವರ್ ಸಹಕರಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net