ವಿದ್ಯಾನಿಕೇತನ ಕಾಲೇಜ್ ವಾರ್ಷಿಕೋತ್ಸವ,   ಡಾ. ನಿರಂಜನಕುಮಾರ ಉದ್ಘಾಟನೆ

IMG_20241224_195810_364-1.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಿಕೇತನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 16ನೇ ವಾರ್ಷಿಕೋತ್ಸವ ಅತ್ಯಂತ ಸಡಗರದಿಂದ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನಕುಮಾರ, ಶಿಸ್ತು, ಸಂಯಮ ವಿದ್ಯಾಥಿರ್ಗಳ ಸಾಧನೆಯ ಗುಟ್ಟು, ಇವುಗಳನ್ನು ಪಾಲನೆ ಮಾಡಬೇಕು. ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಲು, ಪ್ರತಿಭೆ ಮೆರೆಯಲು ವಿದ್ಯಾನಿಕೇತನ ಶ್ರೇಷ್ಠ ಕಾಲೇಜು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಇಂತಹ ಉತ್ತಮ ಶಿಕ್ಷಣ ಸಂಸ್ಥೆ ಆಯ್ದುಕೊಂಡು ಪ್ರತಿ ಕ್ಷೇತ್ರದಲ್ಲಿ ಕ್ರಿಯಾಶೀಲ ಚಟುವಟಿಕೆಗಳನ್ನು ಶಿಸ್ತು ಬದ್ಧವಾಗಿ ಪೂರ್ಣಗೊಳಿಸಿದಲ್ಲಿ ಸಾಧನೆಯ ಕಿರೀಟ ಮುಡಿಗೇರುವುದು ಖಚಿತ ಎಂದು ಹೇಳಿದರು.

ಡಾ. ಪದ್ಮಲತಾ ನಿರಂಜನಕುಮಾರ ಮಾತನಾಡಿ, ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅತಿಥಿಗಳಾಗಿದ್ದ ದಾವಣಗೆರೆ ಜಿಪಂ ಸಿಇಒ ಡಾ. ಸುರೇಶ ಇಟ್ನಾಳ್ ಮಾತನಾಡಿ, ವಿದ್ಯಾರ್ಥಿಗಳ ದೊಡ್ಡ ಸಾಧನೆಗಳು ಆರಂಭವಾಗುವುದು ಸಣ್ಣ ಅವಕಾಶದಿಂದ, ಮನಸ್ಸಿನಿಂದ ಕೆಲಸ ಮಾಡಿದಲ್ಲಿ ಏನೆಲ್ಲ ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಮಹಾವಿದ್ಯಾಲಯದ ಅಧ್ಯಕ್ಷೆ ಶ್ರೀದೇವಿ ಚೌಗುಲೆ, ಕಾರ್ಯದರ್ಶಿ ಪ್ರೊ. ಅನಿಲ್ ಕುಮಾರ ಚೌಗುಲೆ ಅತಿಥಿಗಳ ಪರಿಚಯ ಮಾಡಿದರು. ಡಾ. ಆನಂದ ಮುಳಗುಂದ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಕಳೆದ ವರ್ಷ ರಾಜ್ಯಕ್ಕೆ ಪ್ರಥಮ ಸ್ಥಾನ ಮತ್ತು ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಐಐಟಿ, ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಾಲ್ಕು ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಯಿತು. ಪ್ರಾಚಾರ್ಯರು, ಆಡಳಿತ ಮಂಡಳಿ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ, ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net