ವಿದ್ಯಾನಗರ ಎ ತಂಡ ಚಾಂಪಿಯನ್

bunts cricket
Published on

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿದ್ಯಾನಗರ ಎ ತಂಡ ಚಾಂಪಿಯನ್ ಆಗಿದೆ.

ರೈಲ್ವೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿದ್ಯಾನಗರ ಬಿ ತಂಡವನ್ನು 9 ವಿಕೆಟ್​ಗಳಿಂದ ಸೋಲಿಸಿ, ಎ ತಂಡವು ಟ್ರೋಫಿ ತನ್ನದಾಗಿಸಿಕೊಂಡಿತು. ಮೊದಲ ಸೆಮಿಫೈನಲ್​ನಲ್ಲಿ ವಿದ್ಯಾನಗರ ಎ ತಂಡ, ಹಳೇ ಹುಬ್ಬಳ್ಳಿ ಎ ತಂಡವನ್ನು 100 ರನ್​ಗಳಿಂದ ಹಾಗೂ ದ್ವಿತೀಯ ಸೆಮಿಫೈನಲ್​ನಲ್ಲಿ ವಿದ್ಯಾನಗರ ಬಿ ತಂಡ, ಕೇಶ್ವಾಪುರ ಎ ತಂಡವನ್ನು 9 ವಿಕೆಟ್​ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ವಿದ್ಯಾನಗರ ಬಿ ತಂಡದ ಅಮಿತ್ ಶೆಟ್ಟಿ ಉತ್ತಮ ಬ್ಯಾಟರ್, ವಿದ್ಯಾನಗರ ಎ ತಂಡದ ಪ್ರಜ್ವಲ್ ಶೆಟ್ಟಿ ಉತ್ತಮ ಬೌಲರ್ ಹಾಗೂ ರಾಹುಲ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಪಂದ್ಯಾವಳಿಯಲ್ಲಿ 9 ತಂಡಗಳು ಭಾಗವಹಿಸಿದ್ದವು. ಸಂಘದ ಉಪಾಧ್ಯಕ್ಷ ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ಸತೀಶ ಶೆಟ್ಟಿ, ಜಂಟಿ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ, ಕ್ರೀಡಾ ಸಂಚಾಲಕ ಪುರಂದರ ರೈ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net