ಆಟೋಟಗಳಿಂದ ಶರೀರ ಸದೃಢ

20 Dwd 1
Published on

ಧಾರವಾಡ: ಮಕ್ಕಳು ಟಿವಿ, ಮೊಬೈಲ್‌ನಿಂದ ದೂರವಿರಬೇಕು. ಆಟೋಟಗಳಲ್ಲಿ ಭಾಗವಹಿಸಿ ಶರೀರವನ್ನು ಸದೃಢಗೊಳಿಸಿಕೊಳ್ಳಬೇಕು. ರಾಜ್ಯ ಹಾಗೂ ರಾಷ್ಟ್ರಮಟ್ಟಗಳಿಗೆ ಕ್ರೀಡಾಪಟುಗಳನ್ನು ನೀಡಿದ ಹೆಮ್ಮೆ ಜೆಎಸ್‌ಎಸ್ ಸಂಸ್ಥೆಗೆ ಇದೆ. ಇಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜೆಎಸ್‌ಎಸ್ ಐ.ಟಿ.ಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯೆ ಹೇಳಿದರು.

ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಕ್ಲಸ್ಟರ್‌ನ ಸಿಆರ್‌ಪಿ ಶಿವಬಸವರಾಜ ಜ್ಯೋತಿ ಮಾತನಾಡಿ, ಆಹಾರ ಪದ್ಧತಿಯು ಕ್ರೀಡಾಪಟುಗಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇಕರಿ ಉತ್ಪನ್ನಗಳ ಸೇವನೆಯನ್ನು ಕಡಿಮೆ ಮಾಡಿ ಆರೋಗ್ಯದ ಕಡೆ ಕಾಳಜಿ ವಹಿಸಬೇಕು ಎಂದರು.

ಮುಖ್ಯಾಧ್ಯಾಪಕಿ ಪಿ.ಎಸ್. ಸುಧಾಮಣಿ, ಎ.ಬಿ. ದೇಶಪಾಂಡೆ ಉಪಸ್ಥಿತರಿದ್ದರು. ಎಸ್.ಟಿ. ಚಾಕಲಬ್ಬಿ ಸ್ವಾಗತಿಸಿದರು. ಶಿವಜ್ಯೋತಿ ಕೆ.ಎಸ್. ನಿರೂಪಿಸಿದರು. ಐ.ಐ. ಕುದರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net