ಇಂದು ವಿದ್ಯಾದೇಗುಲ ಶುಭಾರಂಭ!, ಸುಮಾರು 40 ದಿನಗಳ ಭರ್ಜರಿ ರಜೆ ಬಳಿಕ ಶಾಲೆಗೆ ರಳಿದ ವಿದ್ಯಾರ್ಥಿಗಳು, ತಳಿರುತೋರಣಗಳಿಂದ ಶೃಂಗಾರಗೊಂಡ ಶಾಲೆಗಳು

mng-may30-school4
ಮೊದಲ ದಿನ ಆಗಮಿಸುವ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಗಳನ್ನು ತಳಿರುತೋರಣಗಳಿಂದ ಶೃಂಗಾರಗೊಳಿಸಲಾಗಿದೆ.
Published on

ಮಂಗಳೂರು: ಸುಮಾರು 40 ದಿನಗಳ ಭರ್ಜರಿ ರಜಾಮಜಾದ ಬಳಿಕ ವಿದ್ಯಾರ್ಥಿಗಳು ಶುಕ್ರವಾರ ಶಾಲೆಗಳತ್ತ ಹೆಜ್ಜೆಹಾಕಲಿರುವರು. ಶುಕ್ರವಾರ ವಿದ್ಯಾದೇಗುಲ ವಿದ್ಯಾರ್ಥಿಗಳಿಂದ ತುಂಬಿಕೊಳ್ಳಲಿದೆ.

ಸರ್ಕಾರಿ ಶಾಲೆಗಳು ಬುಧವಾರದಿಂದ ಆರಂಭಗೊಂಡಿದ್ದರೂ, ಮೇ 31ರಿಂದ ಮಕ್ಕಳು ಶಾಲೆಗೆ ಬರಲಿದ್ದಾರೆ. ಖಾಸಗಿ ಶಾಲೆಗಳ ಪೈಕಿ ಬಹುತೇಕ ಶಾಲೆಗಳಿಗೆ ಬುಧವಾರದಿಂದಲೇ ಮಕ್ಕಳು ಹಾಜರಾಗಿದ್ದಾರೆ. ಖಾಸಗಿಶಾಲೆಗಳು ಆರಂಭಗೊಂಡ ಮೊದಲ ದಿನವೇ ಬಹುತೇಕ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶುಕ್ರವಾರ ವಿದ್ಯಾರ್ಥಿಗಳನ್ನು ಆದರದಿಂದ ಸ್ವಾಗತಿಸಲು ಪೂರ್ವ ತಯಾರಿ ಈಗಾಘಲೇ ಪೂರ್ಣಗೊಂಡಿದೆ. ಈಬಗ್ಗೆ ಶಾಲಾ ಶಿಕ್ಷಕರೊಂದಿಗೆ ಇಲಾಖೆಯ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದು, ಮಕ್ಕಳ ಸುರಕ್ಷೆಗೆ ಮೊದಲ ಆದ್ಯತೆ ನೀಡಲಾಗಿದೆ. ಶಾಲೆಯ ಆವರಣ, ತರಗತಿಗಳನ್ನುಶುಚಿಗೊಳಿಸುವುದು, ಪಠ್ಯ ಪುಸ್ತಕಗಳು, ಸಮವಸಜೋಡನೆ, ತರಗತಿಗಳಲ್ಲಿ ಬೆಂಚುಗಳ ವ್ಯವಸ್ಥೆ,ಬಿಸಿಯೂಟಕ್ಕೆ ತಯಾರಿ, ಕುಡಿಯುವ ನೀರು, ಕಿಟಕಿಬಾಗಿಲು, ಗಾಳಿ ಬೆಳಕಿನ ವ್ಯವಸ್ಥೆಯೊಂದಿಗೆ ಅಗತ್ಯ ಮೂಲಸೌಕರ್ಯ ಪರಿಶೀಲಿಸಿ ಪುಟಾಣಿಗಳಿಗೆ ಆದ್ದೂರಿ ಸ್ವಾಗತಕ್ಕೆ ಶಿಕ್ಷಕರು ಅಣಿಯಾಗಿದ್ದಾರೆ.

*ತಳಿರು ತೋರಣಗಳಿಂದ ಶೃಂಗಾರಗೊಂಡ ಶಾಲೆ

ಮೇ 31ರಂದು ವಿದ್ಯಾರ್ಥಿಗಳ ದಾಖಲಾತಿ ಹಾಗೂ ಹಾಜರಾತಿಗೆ ಸಂಬಂಧಿಸಿ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಕಾರ್ಯವಾಗಲಿದೆ. ಮೊದಲ ದಿನ ಆಗಮಿಸುವ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಗಳನ್ನು ತಳಿರುತೋರಣಗಳಿಂದ ಶೃಂಗರಿಸಲು ಇಲಾಖೆ ಸೂಚಿಸಿದೆ. ಅಲ್ಲದೆ ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ಪುಷ್ಪಗುಚ್ಚನೀಡುವುದು, ಸ್ವಾಗತ ಬರಹಗಳನ್ನು ಅಳವಡಿಸಲುತಯಾರಿಗಳು ನಡೆಸಲಾಗಿದೆ. ಮೊದಲ ದಿನಪರಸ್ಪರ ಪರಿಚಯ ಮಾಡಿಸಿ ಮಧ್ಯಾಹ್ನದಬಿಸಿಯೂಟದ ಜತೆ ಪಾಯಸ ಹಾಗೂ ಇತರ ಸಿಹಿತಿಂಡಿ ವಿತರಿಸುವ ಕಾರ್ಯವಾಗಲಿದೆ.

---------------

ಶೇ. 57ರಷ್ಟು ಪಠ್ಯ ಪುಸ್ತಕ ವಿತರಣೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಪಠ್ಯ ಪುಸ್ತಕ ವಿತರಿಸುತ್ತಿದ್ದು, ಶೇ. 57ರಷ್ಟು ಪಠ್ಯ ವಿತರಿಸಲಾಗಿದೆ. ಉಳಿದವುಗಳನ್ನು ಶಾಲೆ ಆರಂಭಗೊಂಡ ವಾರದೊಳಗೆ ಪೂರೈಸ ಬೇಕಿದೆ. ಗ್ರಾಮಾಂತರ ಭಾಗಗಳಲ್ಲಿ ಪಠ್ಯದ ಸಮಸ್ಯೆ ಎದುರಾಗುವ ಹಿನ್ನೆಲೆ ತ್ವರಿತಗತಿಯಲ್ಲಿ ತಲುಪಿಸುವ ಜವಾಬ್ದಾರಿ ಇಲಾಖೆಯದ್ದು. ಮತ್ತೊಂದೆಡೆ ಅಗತ್ಯಕ್ಕೆತಕ್ಕಷ್ಟು ಸಮವಸವನ್ನು ಇಲಾಖೆ ಈಗಾಗಲೇ ಪೂರೈಸಿದೆ. ದ.ಕ.ದಲ್ಲಿ 365 ಶಾಲೆಗಳು ದುರಸ್ತಿಗೆ ಎದುರು ನೋಡುತ್ತಿದ್ದು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿಗೆ ಜೀವಕಳೆ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.

-------------------

ದಾಖಲಾತಿ ಅಭಿಯಾನಯಾವುದೇ ಮಕ್ಕಳು ಶಿಕ್ಷಣದಿಂದವಂಚಿತರಾಗದೆ ಶೇ. 100 ದಾಖಲಾತಿನಡೆಸುವುದು ಇಲಾಖೆಯ ಉದ್ದೇಶ. ಇದಕ್ಕಾಗಿ ಮೊದಲವಾರದಲ್ಲಿ ದಾಖಲಾತಿ ಅಭಿಯಾನದೊಂದಿಗೆ, ಸೇತುಬಂಧಪೂರ್ವ ಪರೀಕ್ಷೆಗಳು ನಡೆಯಲಿವೆ. ವ್ಯವಸ್ಥೆಗಳನ್ನು ತಿಳಿದುಕೊಳ್ಳಲು ಅಧಿಕಾರಿಗಳ ತಂಡ ಕೆಲವು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದು ಉಳಿದೆಡೆಯೂ ಮುಂದುವರೆಯಲಿದೆ. ಈ ಬಾರಿ ಎಸೆಸೆಲ್ಸಿಯಲ್ಲಿ ಎಲ್ಲ ಶಾಲೆಗಳಲ್ಲಿ ಶೇ.100 ಲಿತಾಂಶದ ಗುರಿ ಹೊಂದಲಾಗಿದೆ.

ವೆಂಕಟೇಶ್ ಪಟಗಾರ್, ಉಪನಿರ್ದೇಶಕ

ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net