ಸಿಗುವ ಅವಕಾಶ ಪರಿಶ್ರಮದಿಂದ ಸಫಲ, ಜಿಲ್ಲಾಮಟ್ಟದ ಕಬಡ್ಡಿ ಟೂರ್ನಿಯಲ್ಲಿ ವಿದ್ಯಾಭಾರತಿ ರಾಜ್ಯ ಕಾರ್ಯದರ್ಶಿ ವಸಂತ ಮಾಧವ ಅಭಿಪ್ರಾಯ

DK
ಪ್ರೊ ಕಬಡ್ಡಿ ಬೆಂಗಾಲ್ ವಾರಿಯರ್ಸ್ ಆಟಗಾರ ಮಿಥುನ್ ಗೌಡ ಅವರನ್ನು ಶಕ್ತಿ ವಿದ್ಯಾಸಂಸ್ಥೆಯಲ್ಲಿ ಗೌರವಿಸಲಾಯಿತು. ಶಕ್ತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಕೆ.ಸಿ.ನಾಕ್, ವಿದ್ಯಾಭಾರತಿ ರಾಜ್ಯ ಕಾರ್ಯದರ್ಶಿ ವಸಂತ ಮಾಧವ, ದ.ಕ.ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ. ಮೊದಲಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಜಿಲ್ಲಾಮಟ್ಟದ ಕಬಡ್ಡಿ ಟೂರ್ನಿ ನಡೆಯಿತು. ಜಿಲ್ಲೆಯ 47 ಕಬಡ್ಡಿ ತಂಡಗಳು ಭಾಗವಹಿಸಿದ್ದವು.

ಟೂರ್ನಿ ಉದ್ಘಾಟಿಸಿದ ವಿದ್ಯಾಭಾರತಿ ಕರ್ನಾಟಕದ ರಾಜ್ಯ ಕಾರ್ಯದರ್ಶಿ ವಸಂತ ಮಾಧವ ಮಾತನಾಡಿ ‘ಶಾರೀರಿಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಧೃಢರಾಗಬೇಕೆಂಬ ಉದ್ದೇಶದೊಂದಿಗೆ ವಿದ್ಯಾಭಾರತಿ ಕ್ರೀಡಾಕೂಟ ಆಯೋಜಿಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳಿಗಿರುವ ಅವಕಾಶವನ್ನು ಕಠಿಣ ಪರಿಶ್ರಮದಿಂದ ಸಫಲಗೊಳಿಸಬೇಕು. ಶಿಸ್ತು ಮತ್ತು ಸಂಸ್ಕಾರದ ಭಾಗವಾಗಿ ಕ್ರೀಡಾಕೂಟಗಳಿರುತ್ತವೆ. ಇದನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿ, ಪ್ರೊ ಕಬಡ್ಡಿ ಬೆಂಗಾಲ್ ವಾರಿಯರ್ಸ್‌ನ ಆಟಗಾರ ಮಿಥುನ್ ಗೌಡ ಅವರನ್ನು ಗೌರವಿಸಲಾಯಿತು. ಶಕ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ.ನಾಕ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಭಾರತಿ ದ.ಕ. ಜಿಲ್ಲೆಯ ಕ್ರೀಡಾ ಸಂಯೋಜಕ ಕರುಣಾಕರ, ಶಕ್ತಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ದಿವ್ಯಾಜ್ಯೋತಿ ಉಪಸ್ಥಿತರಿದ್ದರು. ವಿದ್ಯಾಭಾರತಿ ದ.ಕ.ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ. ಸ್ವಾಗತಿಸಿ, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲ ರವಿಶಂಕರ್ ಹೆಗಡೆ ವಂದಿಸಿದರು. ಕನ್ನಡ ಉಪನ್ಯಾಸಕ ಸುನೀಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net