

ವಿಜಯಪುರ: ಭಾರತದಲ್ಲಿ ಶಿಕ್ಷಣ ಇದೆ ಆದರೆ ಶಿಕ್ಷಣದಲ್ಲಿ ಭಾರತೀಯತೆ ಇಲ್ಲ ಎಂಬುದು ಇದುವರೆಗಿನ ಸಾರ್ವಜನಿಕರ ಅಭಿಪ್ರಾಯವಾಗಿತ್ತು. ಹೀಗಾಗಿ ಈ ಅಭಿಪ್ರಾಯವನ್ನು ಸಂಪೂರ್ಣವಾಗಿ ಅಳಿಸಿಹಾಕುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿತವಾಗಿರುವುದು ಒಂದು ಮಹತ್ವಪೂರ್ಣವಾದ ಬೆಳವಣಿಗೆಯಾಗಿದೆ ಎಂದು ವಿದ್ಯಾಭಾರತಿ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ ಆರ್ ಜಗದೀಶ್ ಹೇಳಿದ್ರು.
ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ಎಕ್ಸಲಂಟ್ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಇವರು, ಇದನ್ನು ರೂಪಿಸಿಕೊಟ್ಟ ದೇಶದ ಹೆಮ್ಮೆಯ ಖ್ಯಾತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ರು. ದೇಶದಾದ್ಯಂತ ಸಾರ್ವಜನಿಕವಾಗಿ ಎಲ್ಲಾ ಹಂತಗಳಲ್ಲಿ ದೀರ್ಘ ಚರ್ಚೆ, ಸಂವಾದ, ವಿಚಾರ ಮಂಥನಗಳ ಮೂಲಕ ಹೊರ ಒಂದಿರುವ ಶಿಕ್ಷಣ ನೀತಿ ಇದಾಗಿದೆ. ದೇಶದ ಗುಲಾಮಿ ಮಾನಸಿಕತೆಯನ್ನು ಹೋಗಲಾಡಿಸಿ, ಸ್ವದೇಶೀ ಭಾವನೆಯನ್ನು ಬೆಳೆಸಿ, ಸ್ವಾಭಿಮಾನವನ್ನು ಮೂಡಿಸುವ, ಅತ್ಯಂತ ಭರವಸೆಯ ನೀತಿ ಇದಾಗಿದೆಯೆಂದು ಜಗದೀಶ್ ತಿಳಿಸಿದ್ರು.
ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಇದನ್ನು ರೂಪಿಸಿ ಪ್ರಕಟಪಡಿಸಿದೆ. ಆದರೆ ಇದನ್ನು ಪ್ರತ್ಯಕ್ಷ ಜಾರಿಮಾಡುವ ಹೊಣೆಗಾರಿಕೆ ರಾಜ್ಯ ಸರ್ಕಾರಗಳದ್ದು. ಹೊಸ ಶಿಕ್ಷಣ ನೀತಿಯ ಪ್ರಕಾರ ಕರ್ನಾಟದಲ್ಲಿ ಇದುವರೆಗೆ ಇರುವ ಪದವಿ ಪೂರ್ವ ತರಗತಿಗಳನ್ನು 9 ಬಂದ 12 ನೇ ತರಗತಿಯ ಯೋಜನೆಗೆ ಸೇರಿಸಬೇಕಾಗುತ್ತದೆ. ಹಾಗೂ ಇದುವರೆಗೆ ಸ್ವತಂತ್ರವಾಗಿದ್ದ ಶಿಶು ಶಿಕ್ಷಣವನ್ನು ಶಾಲಾ ಶಿಕ್ಷಣದ ಅಡಿಯಲ್ಲಿ ತರಬೇಕಾಗುತ್ತದೆ. ಬರುವ ಶೈಕ್ಷಣಿಕ ವರ್ಷದಿಂದಲೇ ಈ ಹೊಸ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಸಿದ್ಧತೆಗಳನ್ನು ಮಾಡಿಕೊಳ್ಳಕೊಳ್ಳಬೇಕೆಂದು ವಿದ್ಯಾಭಾರತಿ ಕರ್ನಾಟಕ ಒತ್ತಾಯಿಸುತ್ತದೆ ಎಂದರು.
ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ದೇಶದಲ್ಲಿ ಶಿಕ್ಷಣವನ್ನು ಬಲಪಡಿಸಲು ಅನುಕೂಲವಾಗಲಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಎಕ್ಸಲಂಟ್ ಕಾಲೇಜು ಅಧ್ಯಕ್ಷ ಬಸವರಾಜ ಕವಲಗಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಮಾಧ್ಯಮ ಪ್ರಮುಖ ವಿಜಯ ಜೋಶಿ ಮತ್ತು ಇತರರು ಹಾಜರಿದ್ದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..