

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರುನಾಡು ವೆಲ್ಫೇರ್ ಟ್ರಸ್ಟ್ನ ವಿದ್ಯಾಗುರು ಸಂಸ್ಥೆ ವತಿಯಿಂದ 4, 5ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಪರೀಕ್ಷೆಯನ್ನು ಮೇ 18ರಂದು ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ವಿಷ್ಣು ಗುರುವಣ್ಣವರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಗೇರಿ ರಸ್ತೆಯ ವಿದ್ಯಾಗುರು ನವೋದಯ ವಸತಿ ತರಬೇತಿ ಕೇಂದ್ರದಲ್ಲಿ ಬೆಳಗ್ಗೆ 11 ಗಂಟೆಗೆ ಪರೀಕ್ಷೆ ಆರಂಭವಾಗಲಿದೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ (1 ಲಕ್ಷ ರೂ. ಮೊತ್ತದ) ಒಂದು ವರ್ಷ ವಸತಿ ಸಹಿತ, ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗೆ (50 ಸಾವಿರ ರೂ. ಮೊತ್ತದ) ಒಂದು ವರ್ಷ ವಸತಿ ರಹಿತ ನಮೋದಯ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಎಂದರು.
ತೃತೀಯ ಸ್ಥಾನಕ್ಕೆ 25 ಸಾವಿರ, 4 ನೇ ಸ್ಥಾನಕ್ಕೆ 10 ಸಾವಿರ, 5 ನೇ ಸ್ಥಾನಕ್ಕೆ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. 50 ಅಂಕಗಳ ಬಹು ಆಯ್ಕೆ ಮಾದರಿ ಪರೀಕ್ಷೆ ನಡೆಯಲಿದೆ. ಆಸಕ್ತರು ಮೇ 17ರೊಳಗೆ ಸಂಸ್ಥೆ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು ಎಂದರು.
ವಿಶ್ವನಾಥ ಕರವೀರಮಠ, ಪ್ರಭುಕುಮಾರ, ಇತರರು ಇದ್ದರು.