

ಬೆಂಗಳೂರು : ವಿದುಷಿ ಸೌಮ್ಯ ವಿಶಾಲ್ ಅವರ ಅಂಬಾ ಭರತನಾಟ್ಯ ನೃತ್ಯರೂಪಕವು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಇತ್ತೀಚೆಗೆ ಮಲ್ಲೇಶ್ವರಂ ಸೇವಾ ಸದನದಲ್ಲಿ ನಡೆದ ಸಾಂಪ್ರಾದಾಯಿಕ ಕಲಾ ಪ್ರದರ್ಶನವನ್ನು ನೋಡಲು ಕಲಾಪ್ರೇಮಿಗಳು ಮತ್ತು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅಂಬಾ ಎಮಬುದು ಮಹಾಭಾರತದ ಶಿಖಂಡಿ ಎಂಬ ಪ್ರಮುಖ ಪಾತ್ರ. ಅಪರೂಪವಾಗಿ ಚರ್ಚೆಯಾದ ಈ ಪಾತ್ರದ ಕಥೆಯನ್ನು ಭರತನಾಟ್ಯದ ವಿಶಿಷ್ಟ ದೃಷ್ಟಿಕೋನದ ಮೂಲಕ ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಸೌಮ್ಯ ವಿಶಾಲ್ ಯಶಸ್ವಿಯಾದರು. ಅವರ ವಿಧಿ, ಪರಿವರ್ತನೆ ಇತ್ಯಾದಿ ಗಂಭೀರ ವಿಷಯಗಳನ್ನು ನೃತ್ಯರೀತಿಯ ಮೂಲಕ ಪ್ರಸ್ತುತಿ ಪಡಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು.