

ಮೈಸೂರು: ವಿದುಷಿ ಮಿತ್ರಾ ನವೀನ್ ಅವರ ಶಿಷ್ಯೆ ಕುಮಾರಿ ಅರ್ಪಿತಾ ನಾಯಕ ‘ಭರತನಾಟ್ಯ ರಂಗಪ್ರವೇಶ’ ಮಾಡಲು ಅಣಿಯಾಗಿದ್ದಾರೆ.
ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಫೆ.17 ರಂದು ಸಂಜೆ 5.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಂಗ ಪ್ರವೇಶಿಸಲಿದ್ದಾರೆ. ನಾನಾ ನೃತ್ಯಬಂಧಗಳನ್ನು ಪ್ರಸ್ತುತಪಡಿಸುತ್ತಿರುವುದು ವಿಶೇಷವಾಗಿದೆ. ಇವರಿಗೆ ನಿರ್ದೇಶನ, ನೃತ್ಯ ಸಂಯೋಜನೆ, ನಟುವಾಂಗ ಸಹಕಾರವನ್ನು ವಿದುಷಿ ಮಿತ್ರಾ ನವೀನ್ ನೀಡಲಿದ್ದಾರೆ. ವಿದ್ವಾನ್ ಎಂ.ಎಸ್.ನವೀನ್(ಗಾಯನ), ವಿದ್ವಾನ್ ವಿವೇಕ್ ಕೃಷ್ಣ(ಕೊಳಲು), ವಿದ್ವಾನ್ ಜಿ.ಎಸ್.ನಾಗರಾಜ್ (ಮೃದಂಗ) ಸಹಕಾರ ನೀಡಲಿದ್ದಾರೆ.
ಇಂಜಿನಿಯರಿಂಗ್ ಪದವೀಧರೆಯಾಗಿರುವ ಅರ್ಪಿತಾ ನಾಯಕ ಅವರು ಉದಯ ನಾಯಕ ಹಾಗೂ ಸುವರ್ಣ ನಾಯಕ ಅವರ ಪುತ್ರಿ. 15 ವರ್ಷಗಳಿಂದ ವಿದುಷಿ ಮಿತ್ರಾ ನವೀನ್ ಅವರ ಬಳಿ ನೃತ್ಯ ಕಲಿಯುತ್ತಿದ್ದಾರೆ.