ವಿದುಷಿ ಕೃಪಾ ಫಡ್ಕೆಗೆ ಭಾಗ್ವತ ಕಲಾ ಪ್ರಶಸ್ತಿ ಪ್ರದಾನ

SRS PADKE SANMAN
Published on

ಶಿರಸಿ: ಕಳೆದ ಮೂರು ದಶಕದಿಂದ ಶಾಸ್ತ್ರೀಯ ನೃತ್ಯ ಶಿಕ್ಷಣ ಹಾಗೂ ಕಲಾ ಪ್ರದರ್ಶನದಲ್ಲಿ ತೊಡಗಿಕೊಂಡಿರುವ ಇಲ್ಲಿಯ ನಟರಾಜ ನೃತ್ಯ ಶಾಲೆಯ ಪಾಲಕ ವೃಂದ ಈ ವರ್ಷದಿಂದ ನೀಡಲು ಆರಂಭಿಸಿದ ಭಾಗ್ವತ ಕಲಾ ಪ್ರಶಸ್ತಿಯನ್ನು ಮೈಸೂರಿನ ನೃತ್ಯ ಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರದ ನಿರ್ದೇಶಕಿ ವಿದುಷಿ ಕೃಪಾ ಫಡ್ಕೆ ಅವರಿಗೆ ಪ್ರದಾನ ಮಾಡಲಾಯಿತು.
ನಗರದ ಟಿಆರ್​ಸಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಕೃಪಾ ಫಡ್ಕೆ ಮಾತನಾಡಿ, ನೃತ್ಯ ನಮಗೆ ಆತ್ಮ ತೃಪ್ತಿ ಮೂಡಿಸಬೇಕು. ನೃತ್ಯವೂ ಒಂದು ಪೂಜೆ. ಇದರಿಂದ ಮನಸು ಸಂತೃಪ್ತಿಯಿಂದಿರುತ್ತದೆ. ಕುಟುಂಬದೊಂದಿಗೆ ಕಲಾ ತೇರು ಎಳೆಯಬೇಕು ಎಂದರು. ನೆಮ್ಮದಿ ಬಳಗದ ವೈಶಾಲಿ ವಿ.ಪಿ. ಹೆಗಡೆ, ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ಸುಯೋಗಾಶ್ರಮದ ಮುಖ್ಯಸ್ಥೆ ಲತಿಕಾ ಭಟ್ಟ, ಬ್ರಹ್ಮಕುಮಾರಿ ಲೀಲಕ್ಕ ಉಪಸ್ಥಿತರಿದ್ದರು. ನಟರಾಜ ನೃತ್ಯ ಶಾಲೆ ಮುಖ್ಯಸ್ಥೆ ವಿ. ಸೀಮಾ ಭಾಗ್ವತ ಸ್ವಾಗತಿಸಿದರು. ಮಂಜರಿ ನಿರೂಪಿಸಿದರು. ಬಸವರಾಜ ಕಡಪಟ್ಟಿ ವಂದಿಸಿದರು.
ವಿ. ದೀಪಾ ಭಾಗ್ವತ ಅವರಿಂದ ನೃತ್ಯಾರ್ಪಣಂ ಕಲಾ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಹಾಡುಗಾರಿಕೆ ವಿದ್ವಾನ್ ರಘುರಾಮ ರಾಜಗೋಪಾಲನ್, ನಟುವಾಂಗ ವಿ. ಶರತ್ ಟಿ.ಎಸ್. ಬೆಂಗಳೂರು, ಮೃದಂಗದಲ್ಲಿ ವಿ. ಆನೂರ್ ವಿನೋದಶ್ಯಾಮ್ ಕೊಳಲಿನಲ್ಲಿ ವಿ. ದೀಪಕ ಹೆಬ್ಬಾರ ಬೆಂಗಳೂರು, ರಿದಂ ಪ್ಯಾಡ್ ವಿ. ಸಾಯಿವಂಶಿ, ಬೆಂಗಳೂರು ಗಾಯನವಾದನ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net