

ಮಂಡ್ಯ: ನಂದಿಕೇಶ್ವರ ಭರತನಾಟ್ಯ ಕಲಾಶಾಲೆ ವಿದ್ಯಾರ್ಥಿನಿ ಹರ್ಷಿತಾ ನಾಗೇಶ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಅ.19ರ ಸಂಜೆ 4.30ಕ್ಕೆ ನಗರದ ವಿವೇಕಾನಂದ ರಂಗಮಂದಿರದಲ್ಲಿ ನೆರವೇರಲಿದೆ ಎಂದು ಶಾಲೆಯ ಮುಖ್ಯಸ್ಥೆ ವಿದುಷಿ ಕೆ.ಎಸ್.ಶೈಲಾ ತಿಳಿಸಿದರು.
ಹರ್ಷಿತಾ ಭರತನಾಟ್ಯದ ಎಲ್ಲ ಬಗೆಯ ಪ್ರಾಕಾರಗಳ ತರಬೇತಿ ಪಡೆದು ಪ್ರಥಮ ರಂಗ ಪ್ರವೇಶ ಮಾಡುತ್ತಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಟರಾಜ ಕಲಾನಿಕೇತನದ ಸಂಸ್ಥಾಪಕ ನಿರ್ದೇಶಕ ವಿದ್ವಾನ್ ಪ್ರಕಾಶ್ ಎಸ್.ಐಯ್ಯರ್ ಹಾಗೂ ನೃತ್ಯ ಗಂಗೋತ್ರಿ ನಿರ್ದೇಶಕ ವಿದ್ವಾನ್ ಡಾ.ಎ.ಎನ್.ಸುಧೀರ್‌ಕುಮಾರ್‌ಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉಮಾ ದೊರೆಸ್ವಾಮಿ, ಹರ್ಷಿತಾ ಪಾಲಕರಾದ ನಾಗೇಶ್, ಸುನಂದಾ ಇದ್ದರು.