ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಲ್ಲಿ ಏಕಕಾಲಕ್ಕೆ 30 ಸಿಬ್ಬಂದಿಗೆ ದೃಢಪಟ್ಟ ಕರೊನಾ!

Corona
Published on

ಬೆಂಗಳೂರು: ನಗರದ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಲ್ಲಿ ಏಕಕಾಲದಲ್ಲಿ 30 ಸಿಬ್ಬಂದಿಗೆ ಮಹಾಮಾರಿ ಕರೊನಾ ವೈರಸ್​ ಸೋಂಕು ತಗುಲಿರುವುದು ದೃಢವಾಗಿದೆ.

ವಿಕಾಸಸೌಧದ ಮೂರನೇ ಮಹಡಿಯಲ್ಲಿರುವ ಜಲ ಸಂಪನ್ಮೂಲ ಇಲಾಖೆಗೆ ಆನಂದ್​ರಾವ್​ ವೃತ್ತದಲ್ಲಿರುವ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಪತ್ರ ಬರೆದಿದ್ದು, 30 ಸಿಬ್ಬಂದಿಗೆ ಕರೊನಾ ತಗುಲಿರುವುದಾಗಿ ತಿಳಿಸಿದೆ. ಮುನ್ನೆಚ್ಛರಿಕಾ ಕ್ರಮವಾಗಿ ಕಚೇರಿಗೆ ನಾಳೆ ಸ್ಯಾನಿಟೈಸ್​ ಸಿಂಪಡಣೆ ಮಾಡಿ, ಅ. 15 ರಿಂದ 17ರವರೆಗೆ ಪ್ರಾಥಮಿಕ ಸಂಪರ್ಕದಲ್ಲಿರುವ ಇನ್ನುಳಿದ ಸಿಬ್ಬಂದಿಯನ್ನು ಕ್ವಾರಂಟೈನ್​ನಲ್ಲಿ ಇರಲು ಸೂಚಿಸಲಾಗಿದೆ.

ಇಷ್ಟೇ ಅಲ್ಲದೆ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯನ್ನು ಮೂರು ದಿನಗಳ ಕಾಲ ಸೀಲ್​ಡೌನ್​ ಮಾಡಲಾಗಿದೆ.

ರಾಜ್ಯದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಕೂಡ 8662 ಪ್ರಕರಣಗಳು ವರದಿಯಾಗಿದ್ದು, ಒಟ್ಟು 735371 ಕರೊನಾ ಕೇಸ್​ಗಳು ರಾಜ್ಯದಲ್ಲಿ ದೃಢವಾಗಿದೆ. ಬೆಂಗಳೂರಿನಲ್ಲಿ ಇಂದು 4574 ಪ್ರಕರಣಗಳು ವರದಿಯಾಗಿದ್ದು, ಒಟ್ಟು 293405 ಕೇಸ್​ಗಳು ಪತ್ತೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net