

ಮೈಸೂರು: ರಾಜ್ಯಾದ್ಯಂತ ಇರುವ ಮಾಜಿ ಸೈನಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಸೆ.12 ಮತ್ತು 13 ರಂದು ವಿಧಾನಸೌಧ ಚಲೋ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ರಾಜ್ಯ ಸರ್ಕಾರ ಸುಮಾರು 30-40 ವರ್ಷಗಳ ಹಿಂದೆ ಭೂ ಕಾಯ್ದೆ ಅಡಿಯಲ್ಲಿ ಮಾಜಿ ಸೈನಿಕರಿಗೆ ಉಚಿತ ಭೂಮಿ ನೀಡಿದೆ. ಆದರೆ ಸಾಗುವಳಿ ಚೀಟಿ ನೀಡಿಲ್ಲ. ಕೆಲವರಿಗೆ ಭೂಮಿಯನ್ನು ಮಂಜೂರಾತಿ ಮಾಡಿಲ್ಲ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ದಿವಾಕರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಸೈನಿಕರ ಕೋಟಾದಲ್ಲಿ ಶೇ.20 ರಷ್ಟು ಉದ್ಯೋಗ ನೀಡಬೇಕು, ಸರ್ಕಾರಿ ಹುದ್ದೆಗೆ ಸೇರಿರುವವರ ವೇತನ ಪರಿಷ್ಕರಣೆ ಆಗಬೇಕು. ಮಾಜಿ ಸೈನಿಕರ ನಿಗಮ ಮಂಡಳಿ ರಚನೆ ಆಗಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಎಚ್.ಎಸ್. ನಂಜುಂಡಸ್ವಾಮಿ, ಅಣ್ಣೇಗೌಡ, ರಜನಿ ಸುಬ್ಬಯ್ಯ, ನಟರಾಜ್ ಇದ್ದರು.