ವಿದೇಯಕ ತಿದ್ದುಪಡಿ ಧೋರಣೆ ಖಂಡನೀಯ

7sgr3
ದೇವಸ್ಥಾನಗಳ ಹಣ ದುರ್ಬಳಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಗಮ ಸಾಗರ ಶಾಖೆಯಿಂದ ಉಪವಿಭಾಗಾಕಾರಿಗಳ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ರಘುನಾಥ, ಕೆ.ವಿ.ಜಯರಾಮ್, ರವೀಶ್, ಪ್ರಕಾಶ್ ಕುಂಠೆ, ಕೆ.ಎಚ್.ಸುದರ್ಶನ್ ಇತರರಿದ್ದರು.
Published on

ಸಾಗರ: ಕರ್ನಾಟಕ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯಿ ದತ್ತಿಗಳ(ತಿದ್ದುಪಡಿ) ವಿದೇಯಕ-2024ಕ್ಕೆ ತಿದ್ದುಪಡಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಗುರುವಾರ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಗಮ ಸಾಗರ ಶಾಖೆಯಿಂದ ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ವಿದೇಯಕಕ್ಕೆ ತಿದ್ದುಪಡಿ ಮಾಡಲು ಮುಂದಾಗಿರುವ ಕ್ರಮ ಅವೈಜ್ಞಾನಿಕ. ರಾಜ್ಯ ಸರ್ಕಾರದ ತಿದ್ದುಪಡಿ ನೀತಿಯಿಂದಾಗಿ ದೇವಸ್ಥಾನಗಳ ಶ್ರೇಷ್ಠ ಪರಂಪರೆಗೆ ಧಕ್ಕೆ ಬರುವ ಸಾಧ್ಯತೆ ಇದೆ. ಜಿಲ್ಲಾ ಮತ್ತು ರಾಜ್ಯಮಟ್ಟದ ದೇವಸ್ಥಾನಗಳಲ್ಲಿ ವ್ಯವಸ್ಥಾಪನಾ ಸಮಿತಿ ರಚಿಸಿ ಅದಕ್ಕೆ ಅಧಿಕಾರಿಗಳನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮ ಖಂಡನೀಯ. ಇದರಿಂದ ಭ್ರಷ್ಟಾಚಾರ ಹೆಚ್ಚುವ ಸಾಧ್ಯತೆ ಇದ್ದು, ತಕ್ಷಣ ವ್ಯವಸ್ಥಾಪನಾ ಸಮಿತಿಯಲ್ಲಿ ಅಧಿಕಾರಿಗಳನ್ನು ನೇಮಿಸುವ ಧೋರಣೆ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದೇವಸ್ಥಾನಗಳಿಂದ ಸಾಮಾನ್ಯ ನಿಧಿ ಸಂಗ್ರಹಣೆ ಉಲ್ಲೇಖ ಮಾಡಲಾಗಿದೆ. ಹೀಗೆ ಸಂಗ್ರಹ ಮಾಡಿದ ಹಣ ಮುಂದಿನ ದಿನಗಳಲ್ಲಿ ಅನ್ಯಧರ್ಮದ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಂಡರೆ ಹಿಂದು ದೇವಸ್ಥಾನಗಳ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ. ಹಿಂದು ದೇವಸ್ಥಾನಗಳು ಅಭಿವೃದ್ಧಿ ಇಲ್ಲದೆ ಸೊರಗುತ್ತಿದೆ. ಇಂತಹ ಹೊತ್ತಿನಲ್ಲಿ ಸರ್ಕಾರಗಳು ದೇವಸ್ಥಾನಗಳ ಪುನಶ್ಚೇತನಕ್ಕೆ ಮುಂದಾಗುವ ಬದಲು ದೇವಸ್ಥಾನಗಳ ಆದಾಯದ ಮೇಲೆ ಕಣ್ಣು ಹಾಕುವುದು ಎಷ್ಟು ಸರಿ. ತಕ್ಷಣ ರಾಜ್ಯ ಸರ್ಕಾರ ತನ್ನ ನಿಲುವು ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಘುನಾಥ್, ಕೆ.ವಿ.ಜಯರಾಮ್, ರವೀಶ್, ಪ್ರಕಾಶ್ ಕುಂಠೆ, ಕೆ.ಎಚ್.ಸುದರ್ಶನ್, ಪ್ರದೀಪ್ ಆಚಾರಿ, ವಿನೋದ್ ರಾಜ್, ಶ್ರೀರಾಮ್, ಕೆ.ಭೋಜರಾಜ ಗೌಡ, ಪರಶುರಾಮ್, ರೇವತಿ, ಶಾಂತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net